ಕ್ರೀಡೆ

ತಪ್ಪು ಉತ್ತರ ನೀಡಿದ್ದಕ್ಕೆ ಪತ್ನಿಯನ್ನೇ ಟ್ರೋಲ್​ ಮಾಡಿದ ಟೀಮ್​ ಇಂಡಿಯಾ ವೇಗಿ ಇಶಾಂತ್​ ಶರ್ಮ!

ನವದೆಹಲಿ: ಟೀಂ ಇಂಡಿಯಾ ವೇಗಿ ಇಶಾಂತ್​ ಶರ್ಮ ಅವರು ತಮ್ಮ ಪತ್ನಿ ಪ್ರತಿಮಾರನ್ನೇ ಕಾಲೆಳೆದಿದ್ದಾರೆ. ತಂಡದ ಸಹ ಆಟಗಾರರಾದ ರವಿಚಂದ್ರನ್​ ಅಶ್ವಿನ್​ ಹಾಗು ಜಸ್ಪ್ರಿತ್​ ಬೂಮ್ರರನ್ನು ತಪ್ಪಾಗಿ ಗ್ರಹಿಸಿದ್ದಕ್ಕೆ ಪತ್ನಿಯನ್ನೇ ಇಶಾಂತ್​ ಟ್ರೋಲ್​ ಮಾಡಿದ್ದಾರೆ.

ಟೀಮ್​ ಇಂಡಿಯಾ ಬೌಲರ್​ಗಳ ಗುರುತನ್ನು ಸಂಪೂರ್ಣವಾಗಿ ಬಿಟ್ಟುಕೊಡದೆ ಕೇವಲ ಬೌಲಿಂಗ್​ ಶೈಲಿಯ ನಾಲ್ಕ ಚಿತ್ರಗಳನ್ನು ಇಂಡಿಯನ್​ ಕ್ರಿಕೆಟ್​ ಟೀಮ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಲಾಗಿದೆ. ಆ ಕುರಿತು ಬೌಲರ್​ಗಳು ಯಾರೆಂದು ಊಹಿಸಿ ಎಂದು ಪ್ರಶ್ನಿಸಲಾಗಿದೆ.

ಅಂದಹಾಗೆ ಫೋಟೋದಲ್ಲಿರುವುದು ಭುವನೇಶ್ವರ್​ ಕುಮಾರ್​, ರವೀಂದ್ರ ಜಡೇಜಾ, ಇಶಾಂತ್​ ಶರ್ಮಾ ಮತ್ತು ರವಿಚಂದ್ರನ್​ ಅಶ್ವಿನ್​. ಆದರೆ, ಇಶಾಂತ್​ ಪತ್ನಿ ಪ್ರತಿಮಾ ಜಸ್ಪ್ರಿತ್​ ಬೂಮ್ರಾ ಬೌಲಿಂಗ್​ ಅನ್ನು ತಪ್ಪಾಗಿ ಗ್ರಹಿಸಿ ಅಶ್ವಿನ್​ ಎಂದು ಗುರುತಿಸಿದ್ದಾರೆ. ಹೀಗಾಗಿ ಪತ್ನಿಯನ್ನೇ ಕಾಲೆಳೆದಿರುವ ಇಶಾಂತ್​, "ಪ್ರತಿಮಾ ಬೂಮ್ರ ವೇಗದ ಬೌಲರ್​​. ನೀನು ಇನ್ನು ಹೆಚ್ಚಿಗೆ ತಿಳಿಯಬೇಕೆಂದು ನನಗನಿಸುತ್ತದೆ" ಎಂದು ಟ್ರೋಲ್​ ಮಾಡಿದ್ದಾರೆ.

ಇನ್ನು ಇಶಾಂತ್​ ಮತ್ತು ಪ್ರತಿಮಾ ಪ್ರಧಾನಿ ಮಂತ್ರಿಯ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ನಾನು ಮತ್ತು ಪ್ರತಿಮಾ ಪ್ರಧಾನಿ ನಿಧಿಗೆ ದೇಣಿಗೆ ನೀಡಿದೆವು. ನಮ್ಮ ಕೈಲಾದಷ್ಟು ನಾವು ಮಾಡಿದ್ದೇವೆ. ಇದೇ ರೀತಿ ಎಲ್ಲರೂ ನೆರವಾಗಿ. ಸಣ್ಣ ಪ್ರಮಾಣದ ದೇಣಿಗೆ ದೊಡ್ಡ ವ್ಯತ್ಯಾಸವನ್ನೇ ಸೃಷ್ಟಿಸುತ್ತದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. (ಏಜೆನ್ಸೀಸ್​)