ಕ್ರೀಡೆ

CWC2023 FINAL: ಗೆದ್ದೇ ಗೆಲ್ಲಲಿದೆ ಟೀಮ್​ ಇಂಡಿಯಾ!; ವಿಶೇಷ ಪೂಜೆ ಸಲ್ಲಿಸಿದ ಇಶಾನ್ ಕಿಶನ್ ಕುಟುಂಬ

ಪಾಟ್ನಾ: ಏಕದಿನ ವಿಶ್ವಕಪ್​ 2023ರ ಪ್ರತಿಯೊಂದು ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್​ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವ ಟೀಮ್​ ಇಂಡಿಯಾ, ಇದೀಗ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಎದುರಾಳಿ ತಂಡ ಆಸ್ಟ್ರೇಲಿಯಾದ ವಿರುದ್ಧ ಸೆಣಸಾಡಲಿದೆ.

ಟೂರ್ನಿಯ ಪೂರ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ಕ್ರಿಕೆಟ್​ ಅಭಿಮಾನಿಗಳ ಗಮನ ಸೆಳೆದಿರುವ ಆಸ್ಟ್ರೇಲಿಯಾ ಫೈನಲ್​ ಹಂತದಲ್ಲಿ ಭಾರತಕ್ಕೆ ಎಷ್ಟರ ಮಟ್ಟಿಗೆ ಪೈಪೋಟಿ ಕೊಡಲು ಸಾಧ್ಯ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್​ ಪಂದ್ಯಕ್ಕೆ ಸಜ್ಜಾಗಿರುವ ಭಾರತ ತಂಡದ ಆಟಗಾರರು, ಈಗಾಗಲೇ ಅಖಾಡಕ್ಕಿಳಿದು ಅಭ್ಯಾಸ ನಡೆಸುತ್ತಿದ್ದಾರೆ. ಈ ಒಂದು ಹೈವೋಲ್ಟೆಜ್​ ಪಂದ್ಯ ವೀಕ್ಷಿಸಲು ಸಹ್ರಸಾರು ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದು, ಇಡೀ ದೇಶವೇ ಟೀಮ್​ ಇಂಡಿಯಾದ ಗೆಲುವಿಗೆ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದೆ. ವ್ಯಾಪಕವಾಗಿ ಹೋಮ, ಹವನ, ಪೂಜೆ ಮಾಡುವ ಮುಖೇನ ತಂಡದ ಗೆಲುವಿನ ಜಪ ಮಾಡುತ್ತಿದೆ.

ಈ ಮಧ್ಯೆ ಭಾರತೀಯ ಕ್ರಿಕೆಟ್​ ತಂಡದ ಎಡಗೈ ಓಪನಿಂಗ್​ ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಆದ ಇಶಾನ್​ ಕಿಶಾನ್​ ಕುಟುಂಬಸ್ಥರು ಭಾರತದ ಗೆಲುವಿಗಾಗಿ ಪಾಟ್ನಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಛತ್ ಪೂಜಾ ದಿನದಂದೇ ವಿಶ್ವಕಪ್ ಪಂದ್ಯ ನಡೆಯುತ್ತಿರುವುದು ಶುಭ ಎಂದು ಕಿಶನ್​ ತಾಯಿ ಸುಚಿತ್ರಾ ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).