ಕ್ರೀಡೆ

ಬಾಕ್ಸಿಂಗ್​​ ಡೇ ಟೆಸ್ಟಗೂ ಮುನ್ನ Team Indiaಗೆ ಆಘಾತ; ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾದ ಸ್ಟಾರ್​ ಪ್ಲೇಯರ್, ಹೆಚ್ಚಿದ ಆತಂಕ​

ಮೆಲ್ಬೋರ್ನ್​​: ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯವು ಡಿಸೆಂಬರ್​ 26ರಿಂದ ಮೆಲ್ಬೋರ್ನ್​ನಲ್ಲಿ ಆರಂಭವಾಗಲಿದ್ದು, ಬಾಕ್ಸಿಂಗ್​ ಡೇ ಟೆಸ್ಟ್​ಗಾಗಿ (Boxing Day Test) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇನ್ನೂ ಸರಣಿಯ ಮೂರನೇ ಪಂದ್ಯ ಮಳೆಯಿಂದಾಗಿ ನೀರಸ ಡ್ರಾಗೊಂಡಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫಿನಾಲೆ (World Test Championship Finale) ದೃಷ್ಠಿಯಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಕಠಿಣ ಅಭ್ಯಾಸ ನಡೆಸುತ್ತಿವೆ.

ಸರಣಿಯ ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದೆರದು ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ನಾಲ್ಕನೇ ಪಂದ್ಯವನ್ನು ಗೆಲ್ಲುವ ನಿಟ್ಟಿನಲ್ಲಿ ಟೀಮ್ ಇಂಡಿಯಾದ (Team India) ಆಟಗಾರರು​ ಎಂಸಿಜಿ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದು, ಅಭ್ಯಾಸದ ವೇಳೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಗಾಯಗೊಂಡಿದ್ದು, ಅರ್ಧಕ್ಕೆ ಮೈದಾನದಿಂದ ಹೊರನಡೆದಿದ್ದಾರೆ.

ನೆಟ್ಸ್​ನಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ರೋಹಿತ್ ಶರ್ಮಾಗೆ (Rohit Sharma) ಚೆಂಡು ಎಸೆಯುತ್ತಿದ್ದರು. ಇದೇ ವೇಳೆ ಚೆಂಡು ಅವರ ಎಡ ಮೊಣಕಾಲಿಗೆ ತಾಗಿದ್ದು, ತೀವ್ರ ನೋವಿನಿಂದಾಗಿ ರೋಹಿತ್​ ಶರ್ಮ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಿದ್ದು ಫಿಸಿಯೋ ಬಂದು ಪರಿಶೀಲಿಸಿದ್ದಾರೆ. ಇದಾದ ಬಳಿಕವೂ ನೋವು ಕಡಿಮೆಯಾಗದ ಕಾರಣ ರೋಹಿತ್​ ಮೈದಾನದಿಂದ ಹೊರನಡೆದಿದ್ದು, ಈ ವಿಚಾರ ಇದೀಗ ಟೀಮ್​ ಇಂಡಿಯಾಗೆ (Team India) ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಡಿಸೆಂಬರ್​ 26ರಿಂದ ಬಾಕ್ಸಿಂಗ್​ ಡೇ ಟೆಸ್ಟ್​ ಶುರುವಾಗಲಿದ್ದು, ಇದಕ್ಕೂ ಮುನ್ನ ರೋಹಿತ್​ ಶರ್ಮ ಗಾಯಕ್ಕೀಡಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಗಾಯದ ತೀವ್ರತೆ ಕುರಿತಾಗಿ ಮಾಹಿತಿ ಇನ್ನು ಹೊರಬೀಳದ ಕಾರಣ ಈ ವಿಚಾರ ಚಿಂತೆಗೀಡು ಮಾಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫಿನಾಲೆ ದೃಷ್ಟಿಯಿಂದ ಭಾರತಕ್ಕೆ ಮುಂಬರುವ ಎರಡು ಪಂದ್ಯಗಳು ಮಹತ್ವದಾಗಿದ್ದು, ಅಂತಿಮವಾಗಿ ಏನಾಗಲಿದೆ ಎಂದು ಕಾದುನೋಡಬೇಕಿದೆ.