ಲೈಂಗಿಕ ದೌರ್ಜನ್ಯ ಆರೋಪದ ಮಧ್ಯೆಯೂ ರಹಸ್ಯವಾಗಿ ಯಶ್​ ದಯಾಳ್​ ಮದ್ವೆಯಾದ ಶ್ವೇತಾ ಪುಂಡಿರ್ ಯಾರು? Yash Dayal  
ಐಪಿಎಲ್

ಲೈಂಗಿಕ ದೌರ್ಜನ್ಯ ಆರೋಪದ ಮಧ್ಯೆಯೂ ರಹಸ್ಯವಾಗಿ ಯಶ್​ ದಯಾಳ್​ ಮದ್ವೆಯಾದ ಶ್ವೇತಾ ಪುಂಡಿರ್ ಯಾರು? Yash Dayal

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್​ ವೇಗಿ ಯಶ್ ದಯಾಳ್ ವೈಯಕ್ತಿಕ ವಿಚಾರವಾಗಿ ಮತ್ತೊಮ್ಮೆ ಸುದ್ದಿ
  • ಲೈಂಗಿಕ ದೌರ್ಜನ್ಯದಂತಹ ವಿವಾದಗಳ ನಡುವೆಯೂ ದಯಾಳ್​ ಅವರ ಇತ್ತೀಚಿನ ರಹಸ್ಯ ಮದುವೆ ಬಗ್ಗೆ ಭಾರಿ ಚರ್ಚೆ
  • ಫೆಬ್ರವರಿ 4ರಂದು ನೋಯ್ಡಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶ್ವೇತಾ ಪುಂಡಿರ್​ ವರಿಸಿದ ಯಶ್ ದಯಾಳ್​
  • ದಯಾಳ್​ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅವರನ್ನು ಮದುವೆಯಾದ ಯುವತಿ ಯಾರು ಹುಡುಕಾಟ ಶುರು
Yash Dayal : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್​ ವೇಗಿ ಯಶ್ ದಯಾಳ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ವಿವಾದಗಳ ನಡುವೆಯೂ ಅವರ ಇತ್ತೀಚಿನ ರಹಸ್ಯ ಮದುವೆ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಾಗುತ್ತಿದೆ.
ಹೌದು, ಫೆಬ್ರವರಿ 4ರಂದು ನೋಯ್ಡಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಯಶ್ ದಯಾಳ್ ಅವರು ಶ್ವೇತಾ ಪುಂಡಿರ್ ಎಂಬುವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ ಈಗ ಬಹಿರಂವಾಗಿದೆ. ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟೀಮ್ ಇಂಡಿಯಾ ಆಟಗಾರರಾಗಲಿ ಅಥವಾ ಆರ್‌ಸಿಬಿ ಆಟಗಾರರಾಗಲಿ ಯಾರೊಬ್ಬರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಳೆದ ಒಂದು ವರ್ಷದಿಂದ ಯಶ್ ದಯಾಳ್ ಅವರು ಲೈಂಗಿಕ ಕಿರುಕುಳ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ವಿರುದ್ಧ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣವನ್ನು ಯಶ್ ದಯಾಳ್​ ಅವರ ಮಾಜಿ ಗೆಳತಿ ದಾಖಲಿಸಿದ್ದರೆ, ಇನ್ನೊಂದು ಪ್ರಕರಣವನ್ನು ಅಪ್ರಾಪ್ತೆ ದಾಖಲಿಸಿದ್ದು, ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದಯಾಳ್ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು. ಆದಾಗ್ಯೂ, ರಾಜಸ್ಥಾನ ಹೈಕೋರ್ಟ್ ವಾರಂಟ್‌ಗೆ ತಡೆ ನೀಡಿತು.
ಈ ಪ್ರಕರಣಗಳು ಪ್ರಸ್ತುತ ತನಿಖೆಯಲ್ಲಿದ್ದರೂ, ದಯಾಳ್​ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಸದ್ಯ ನಡೆಯುತ್ತಿರುವ ವಿವಾದಗಳು ಮತ್ತು ಕಾನೂನು ಕ್ರಮಗಳ ಹೊರತಾಗಿಯೂ, ಅವರ ವಿವಾಹವು ಇದೀಗ ಚರ್ಚೆಯ ವಿಷಯವಾಗಿದೆ. ದಯಾಳ್​ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅವರನ್ನು ಮದುವೆಯಾದ ಯುವತಿ ಯಾರು ಎಂಬ ಹುಡುಕಾಟವು ಕೂಡ ಜಾಲತಾಣದಲ್ಲಿ ನಡೆಯುತ್ತಿದೆ.

ಯಾರು ಈ ಶ್ವೇತಾ ಪುಂಡೀರ್​?

ಅಂದಹಾಗೆ, ಶ್ವೇತಾ ಪುಂಡೀರ್ ಉತ್ತರಾಖಂಡ ಮೂಲದ ಯುವತಿ. ಈಕೆ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಶ್ವೇತಾ ಓರ್ವ ಕಂಟೆಂಟ್​ ಕ್ರಿಯೇಟರ್​ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮಾತ್ರವಲ್ಲ, ಪ್ರಸಾರಕರಾಗಿಯೂ ಕೆಲಸ ಮಾಡುತ್ತಾರೆ. ಶ್ವೇತಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 5.87 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಅಲ್ಲದೆ, ಯೂಟ್ಯೂಬ್​ನಲ್ಲಿ 50 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಇಂಟರ್ ಕಾಂಟಿನೆಂಟಲ್ ಲೆಜೆಂಡ್ಸ್ ಲೀಗ್‌ನಲ್ಲಿ ಪ್ರಸಾರಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಆದಾಗ್ಯೂ, ಈ ಇಬ್ಬರೂ ಯಾವಾಗ? ಮತ್ತು ಹೇಗೆ ಭೇಟಿಯಾದರು ಎಂಬುದು ಇನ್ನೂ ತಿಳಿದಿಲ್ಲ.
ಇನ್ನೂ ಯಶ್ ದಯಾಳ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ. 2026ರ ಐಪಿಎಲ್ ಸೀಸನ್​ನಲ್ಲಿ ಆಡುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ. ವಿವಾದಗಳ ಹೊರತಾಗಿಯೂ ಅವರ ಕ್ರಿಕೆಟ್ ವೃತ್ತಿಜೀವನ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆರ್‌ಸಿಬಿ ತಂಡ 2025ರ ಐಪಿಎಲ್ ಸೀಸನ್​ನಲ್ಲಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದರು. ಅಂದಹಾಗೆ, ದಯಾಳ್ 43 ಐಪಿಎಲ್ ಪಂದ್ಯಗಳಲ್ಲಿ 41 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ವರ್ಷ (ಐಪಿಎಲ್ 2025) ಆರ್​ಸಿಬಿ ಪರ 13 ವಿಕೆಟ್‌ಗಳನ್ನು ಕಬಳಿಸಿದರು, (ಏಜೆನ್ಸೀಸ್​).