12 ವರ್ಷಗಳ ಹಿಂದೆಯೇ ವೈಭವ್ ಬಗ್ಗೆ ಭವಿಷ್ಯ ನುಡಿದಿದ್ರಾ ಜೋಫ್ರಾ ಆರ್ಚರ್! ಹಳೇ ಟ್ವೀಟ್​ ವೈರಲ್​​... ಏನಿದು ವಿಚಿತ್ರ? Vaibhav Suryavanshi 
ಐಪಿಎಲ್

12 ವರ್ಷಗಳ ಹಿಂದೆಯೇ ವೈಭವ್ ಬಗ್ಗೆ ಭವಿಷ್ಯ ನುಡಿದಿದ್ರಾ ಜೋಫ್ರಾ ಆರ್ಚರ್! ಹಳೇ ಟ್ವೀಟ್​ ವೈರಲ್​​... ಏನಿದು ವಿಚಿತ್ರ? Vaibhav Suryavanshi

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಸುನಾಮಿ ಇಡೀ ವಿಶ್ವ ಕ್ರಿಕೆಟ್‌ ಅನ್ನೇ ಬೆರಗುಗೊಳಿಸಿದೆ
  • ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್​ ಗಳಿಸಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ
  • ರಾಜಸ್ಥಾನ ರಾಯಲ್ಸ್ ತಂಡವು ಸುಲಭವಾಗಿ ಕ್ವಾಲಿಫೈಯರ್-2 ಹಂತಕ್ಕೆ ಲಗ್ಗೆ ಇಡಲು ಪ್ರಮುಖ ಕಾರಣರಾದ ವೈಭವ್​
  • ಇದೀಗ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರು ಬರೋಬ್ಬರಿ 12 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ವೈರಲ್​
Vaibhav Suryavanshi : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಸುನಾಮಿ ಇಡೀ ವಿಶ್ವ ಕ್ರಿಕೆಟ್‌ ಅನ್ನೇ ಬೆರಗುಗೊಳಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ ಬರೋಬ್ಬರಿ 12 ಸಿಕ್ಸರ್‌ಗಳ ನೆರವಿನಿಂದ 97 ರನ್ ಸಿಡಿಸಿ ಅಬ್ಬರಿಸಿದ ವೈಭವ್, ರಾಜಸ್ಥಾನ ತಂಡವು 243 ರನ್‌ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಆ ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವನ್ನು ಜೋಫ್ರಾ ಆರ್ಚರ್ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ 196 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡವು ಸುಲಭವಾಗಿ ಕ್ವಾಲಿಫೈಯರ್-2 ಹಂತಕ್ಕೆ ಲಗ್ಗೆ ಇಟ್ಟಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ವಾರಸ್ಯಕರ ವಿಷಯವೊಂದು ಭಾರಿ ವೈರಲ್ ಆಗುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರು ಬರೋಬ್ಬರಿ 12 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ (ಟ್ವಿಟರ್ ಪೋಸ್ಟ್) ಇದೀಗ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಆಗಸ್ಟ್ 4, 2014 ರಂದು ಆರ್ಚರ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ '97? WTF' ಎಂದು ಪೋಸ್ಟ್ ಮಾಡಿದ್ದರು. ಅಂದು ಅವರು ಯಾವ ಸಂದರ್ಭದಲ್ಲಿ ಈ ಟ್ವೀಟ್ ಮಾಡಿದ್ದರು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಈಗ ವೈಭವ್ ಸೂರ್ಯವಂಶಿ ಅವರ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಬಳಿಕ ಈ ಹಳೆಯ ಪೋಸ್ಟ್ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ವಾರಸ್ಯಕರ ವಿಷಯವೊಂದು ಭಾರಿ ವೈರಲ್ ಆಗುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರು ಬರೋಬ್ಬರಿ 12 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ (ಟ್ವಿಟರ್ ಪೋಸ್ಟ್) ಇದೀಗ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಆಗಸ್ಟ್ 4, 2014 ರಂದು ಆರ್ಚರ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ '97? WTF' ಎಂದು ಪೋಸ್ಟ್ ಮಾಡಿದ್ದರು. ಅಂದು ಅವರು ಯಾವ ಸಂದರ್ಭದಲ್ಲಿ ಈ ಟ್ವೀಟ್ ಮಾಡಿದ್ದರು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಈಗ ವೈಭವ್ ಸೂರ್ಯವಂಶಿ ಅವರ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಬಳಿಕ ಈ ಹಳೆಯ ಪೋಸ್ಟ್ ಮುನ್ನೆಲೆಗೆ ಬಂದಿದೆ.
ವೈಭವ್ ಅವರ ಈ ಅದ್ಭುತ ಇನ್ನಿಂಗ್ಸ್ ಅನ್ನು ಜೋಫ್ರಾ ಆರ್ಚರ್ 12 ವರ್ಷಗಳ ಹಿಂದೆಯೇ ಪ್ರವಾದಿಯಂತೆ ಊಹಿಸಿದ್ದರೇ? ವೈಭವ್ ಇನ್ನಿಂಗ್ಸ್ ಬಗ್ಗೆ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರಾ? ಎಂದು ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರು ತರಹೇವಾರಿ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಾ ಈ ಹಳೆಯ ಟ್ವೀಟ್‌ ಅನ್ನು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.
ಜೋಫ್ರಾ ಆರ್ಚರ್ ಅವರ ಇಂತಹ ಹಳೆಯ ಟ್ವೀಟ್‌ಗಳು ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರ ಹಲವು ಪೋಸ್ಟ್‌ಗಳು ಇದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಈ ರಹಸ್ಯದ ಕುರಿತು ಸ್ವತಃ ಪ್ರತಿಕ್ರಿಯಿಸಿದ್ದ ಆರ್ಚರ್, "ನಾನು ಹದಿಹರೆಯದಲ್ಲಿದ್ದಾಗ ತಮಾಷೆಗಾಗಿ ಏನನ್ನೋ ಪೋಸ್ಟ್ ಮಾಡುತ್ತಿದ್ದೆ, ಈಗ ಅವು ಈ ರೀತಿ ವೈರಲ್ ಆಗುತ್ತಿವೆ. ಇದನ್ನು ನೋಡಿದರೆ ನನಗೆ ತುಂಬಾ ವಿಚಿತ್ರ ಎನಿಸುತ್ತದೆ" ಎಂದು ಹೇಳಿಕೊಂಡಿದ್ದರು. ವೈಭವ್ ಅವರ ಸ್ಫೋಟಕ ಇನ್ನಿಂಗ್ಸ್ ಬಳಿಕ ಆರ್ಚರ್ ಅವರ ಈ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದ್ದು, ಪ್ರಸ್ತುತ ಆರ್ಚರ್ ಹಾಗೂ ವೈಭವ್ ಇಬ್ಬರೂ ರಾಜಸ್ಥಾನ ರಾಯಲ್ಸ್ ತಂಡದಲ್ಲೇ ಇರುವುದು ಈ ಇಡೀ ಪ್ರಸಂಗಕ್ಕೆ ಮತ್ತಷ್ಟು ರೋಚಕತೆ ತಂದಿದೆ. ಅಭಿಮಾನಿಗಳು ಇದನ್ನು 'ಕ್ರಿಕೆಟ್ ಮ್ಯಾಜಿಕ್' ಎಂದು ಕರೆಯುತ್ತಾ ಸಂಭ್ರಮಿಸುತ್ತಿದ್ದಾರೆ.
ಜೋಫ್ರಾ ಆರ್ಚರ್ ಅವರ ಇಂತಹ ಹಳೆಯ ಟ್ವೀಟ್‌ಗಳು ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಅವರ ಹಲವು ಪೋಸ್ಟ್‌ಗಳು ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದವು. ಈ ರಹಸ್ಯದ ಕುರಿತು ಸ್ವತಃ ಪ್ರತಿಕ್ರಿಯಿಸಿರುವ ಆರ್ಚರ್, ನಾನು ಹದಿಹರೆಯದಲ್ಲಿದ್ದಾಗ ತಮಾಷೆಗಾಗಿ ಏನನ್ನೋ ಪೋಸ್ಟ್ ಮಾಡುತ್ತಿದ್ದೆ, ಈಗ ಅವು ಈ ರೀತಿ ವೈರಲ್ ಆಗುತ್ತಿವೆ. ಇದನ್ನು ನೋಡಿದರೆ ನನಗೆ ತುಂಬಾ ವಿಚಿತ್ರ ಎನಿಸುತ್ತದೆ ಎಂದು ಹೇಳಿಕೊಂಡಿದ್ದರು.
ವೈಭವ್ ಅವರ ಸ್ಫೋಟಕ ಇನ್ನಿಂಗ್ಸ್ ಬಳಿಕ ಆರ್ಚರ್ ಅವರ ಈ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದ್ದು, ಪ್ರಸ್ತುತ ಆರ್ಚರ್ ಹಾಗೂ ವೈಭವ್ ಇಬ್ಬರೂ ರಾಜಸ್ಥಾನ ರಾಯಲ್ಸ್ ತಂಡದಲ್ಲೇ ಇರುವುದು ಈ ಇಡೀ ಪ್ರಸಂಗಕ್ಕೆ ಮತ್ತಷ್ಟು ರೋಚಕತೆ ತಂದಿದೆ. ಅಭಿಮಾನಿಗಳು ಇದನ್ನು 'ಕ್ರಿಕೆಟ್ ಮ್ಯಾಜಿಕ್' ಎಂದು ಕರೆಯುತ್ತಾ ಸಂಭ್ರಮಿಸುತ್ತಿದ್ದಾರೆ.
ಇನ್ನು ಈ ಹೈ-ವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲಿ 'ಮಿಸ್ಟರ್ ಐಪಿಎಲ್' ಸುರೇಶ್ ರೈನಾ ಹೊಂದಿದ್ದ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ಈಗಾಗಲೇ 600ಕ್ಕೂ ಹೆಚ್ಚು ರನ್ ಗಳಿಸಿರುವ ಅವರು, ಸದ್ಯ ಒಟ್ಟು 680 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಶ್ವ ಕ್ರಿಕೆಟ್‌ನ ಹೊಸ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವ 15 ವರ್ಷದ ವೈಭವ್, ಗುಜರಾತ್ ಟೈಟನ್ಸ್ ವಿರುದ್ಧ ಇಂದು ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲೂ ಇದೇ ರೀತಿಯ ಜಬರ್ದಸ್ತ್ ಫಾರ್ಮ್ ಅನ್ನು ಮುಂದುವರಿಸುವ ತವಕದಲ್ಲಿದ್ದಾರೆ, (ಏಜೆನ್ಸೀಸ್​).