ಕ್ರೀಡೆ

ಬಲಿಷ್ಠ ಬ್ಯಾಟಿಂಗ್ ಆರ್ಡರ್​ ಹೊಂದಿರುವ 3 ಐಪಿಎಲ್​ ತಂಡಗಳು ಇವೇ ನೋಡಿ! | IPL 2025

ನವದೆಹಲಿ: ದುಬೈನಲ್ಲಿ ನಡೆದ ಎರಡು ದಿನಗಳ ಐಪಿಎಲ್ (IPL 2025) ಹರಾಜು ಪ್ರಕ್ರಿಯೆಯಲ್ಲಿ ಊಹಿಸಲಾಗಿದ್ದ ಆಟಗಾರರ ಭವಿಷ್ಯ ಅಂದುಕೊಂಡತೆಯೇ ನಡೆದಿದ್ದು, ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿತು. ಅರ್ಷ್​ದೀಪ್​ ಸಿಂಗ್​, ರಿಷಭ್ ಪಂತ್​, ವೆಂಕಟೇಶ್​ ಅಯ್ಯರ್​, ಶ್ರೇಯಸ್​ ಅಯ್ಯರ್, ಯಜುವೇಂದ್ರ ಚಹಲ್​ ಸೇರಿದಂತೆ ಒಂದಷ್ಟು ಸ್ಟಾರ್ ಕ್ರಿಕೆಟಿಗರು ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಸದ್ಯ ಯುವ ಹಾಗೂ ಅನುಭವಿ ಆಟಗಾರರನ್ನೇ ತಮ್ಮ ಫ್ರಾಂಚೈಸಿಗೆ ಖರೀದಿ ಮಾಡಿರುವ 10 ತಂಡಗಳ ಪೈಕಿ ಉತ್ತಮ ಬ್ಯಾಟಿಂಗ್ ಲೈನ್​ ಹೊಂದಿರುವ ಮೂರು ಫ್ರಾಂಚೈಸಿಗಳು ಹೀಗಿವೆ ನೋಡಿ.

ಸನ್​ರೈಸರ್ಸ್​ ಹೈದರಾಬಾದ್​

ಕಾವ್ಯ ಮಾರನ್ ಮಾಲೀಕತ್ವದ ಸನ್​ರೈಸರ್ಸ್​ ಹೈದರಾಬಾದ್​ ಈ ಬಾರಿ ಹರಾಜಿನಲ್ಲಿ ಉತ್ತಮ ಖರೀದಿಯನ್ನು ಮಾಡಿತು. ತಂಡದ ಬಲಿಷ್ಠ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದ ಫ್ರಾಂಚೈಸಿ, ಹರಾಜಿನಲ್ಲಿ ಅತ್ಯುತ್ತಮ ಬ್ಯಾಟರ್​ಗಳನ್ನೇ ಖರೀದಿಸಿದೆ.

ಪ್ರಮುಖ ಆಟಗಾರರು

  • ಟ್ರಾವಿಸ್ ಹೆಡ್
  • ಇಶಾನ್ ಕಿಶನ್
  • ಅಭಿಷೇಕ್ ಶರ್ಮಾ
  • ಹೆನ್ರಿಚ್ ಕ್ಲಾಸೆನ್
  • ನಿತೀಶ್ ರೆಡ್ಡಿ

ಮುಂಬೈ ಇಂಡಿಯನ್ಸ್​

ಐದು ಬಾರಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಚಾಂಪಿಯನ್ಸ್ ಆಗಿ ಮಿಂಚಲು ಸಜ್ಜಾಗಿದೆ. ಅದಕ್ಕಾಗಿಯೇ ತಂಡಕ್ಕೆ ಉತ್ತಮ ಬ್ಯಾಟರ್​ ಹಾಗೂ ಬೌಲರ್​ಗಳನ್ನು ಆಯ್ಕೆ ಮಾಡಿಕೊಂಡಿದೆ. ಯಾರನ್ನು ಹರಾಜಿನಲ್ಲಿ ಖರೀದಿ ಮಾಡಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಫ್ರಾಂಚೈಸಿ, ಟೀಮ್​ನ ಈ ಐವರು ಬಲಿಷ್ಠ ಬ್ಯಾಟರ್​ಗಳ ಮೇಲೆ ಅಪಾರ ಭರವಸೆ ಹೊಂದಿದೆ.

ಪ್ರಮುಖ ಆಟಗಾರರು

  • ರೋಹಿತ್ ಶರ್ಮಾ
  • ಸೂರ್ಯಕುಮಾರಿ ಯಾದವ್
  • ತಿಲಕ್ ವರ್ಮಾ
  • ಹಾರ್ದಿಕ್ ಪಾಂಡ್ಯ
  • ವಿಲ್ ಜ್ಯಾಕ್ಸ್

ಡೆಲ್ಲಿ ಕ್ಯಾಪಿಟಲ್ಸ್​

ಇತರೆ ತಂಡಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಹರಾಜಿನಲ್ಲಿ ಅಚ್ಚರಿ ಮೂಡುವಂತೆ ಆಟಗಾರರನ್ನು ಖರೀದಿಸಿತು. ​ಅದರಲ್ಲೂ ವಿಶೇಷವಾಗಿ ಬ್ಯಾಟರ್​ಗಳ ಮೇಲೆ ಹೆಚ್ಚು ಗಮನಹರಿಸಿದ ಫ್ರಾಂಚೈಸಿ, ಉತ್ತಮ ಖರೀದಿಯನ್ನೇ ಮಾಡಿತು. ಸದ್ಯ ಯಾವ ಬ್ಯಾಟ್ಸ್​ಮನ್​ಗಳು ಡೆಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ.

ಪ್ರಮುಖ ಆಟಗಾರರು

  • ಕೆ.ಎಲ್. ರಾಹುಲ್‌
  • ಟ್ರಿಸ್ಟಾನ್ ಸ್ಟಬ್ಸ್
  • ಹ್ಯಾರಿ ಬ್ರೂಕ್
  • ಅಭಿಷೇಕ್ ಪೊರೆಲ್
  • ಝಾರ್ ಪಟೇಲ್