ದುಬೈ: ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ 30 ವಿದೇಶಿಯರ ಸಹಿತ ಒಟ್ಟು 72 ಆಟಗಾರರು ಮಾರಾಟವಾದರು. 10 ತಂಡಗಳು ಒಟ್ಟು 230.45 ಕೋಟಿ ರೂ. ಖರ್ಚು ಮಾಡಿದವು. 8 ತಂಡಗಳು 8 ವಿದೇಶಿಯರ ಸಹಿತ ಗರಿಷ್ಠ 25 ಆಟಗಾರರ ಕೋಟಾ ಭರ್ತಿಗೊಳಿಸಿದರೆ, ಕೆಕೆಆರ್ 23 ಮತ್ತು ರಾಜಸ್ಥಾನ 22 ಆಟಗಾರರ ತಂಡ ರಚಿಸಿತು. ಮೊದಲ ಸಲದ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಯಶಸ್ವಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಹರಾಜಿನಲ್ಲಿ ಎಲ್ಲ 10 ತಂಡಗಳು ಖರೀದಿಸಿದ ಹೊಸ ಆಟಗಾರರ ವಿವರ ಹೀಗಿದೆ...
ತಂಡಗಳು ಖರೀದಿಸಿದ ಆಟಗಾರರು (ಮೊತ್ತ: ರೂಪಾಯಿಗಳಲ್ಲಿ)
*ಆರ್ಸಿಬಿ (ಬೆಂಗಳೂರು)
ಅಲ್ಜಾರಿ ಜೋಸ್ೆ (11.50 ಕೋಟಿ), ಯಶ್ ದಯಾಳ್ (5 ಕೋಟಿ), ಲಾಕಿ ಗ್ಯುರ್ಸನ್ (2 ಕೋಟಿ), ಟಾಮ್ ಕರನ್ (1.50 ಕೋಟಿ), ಸೌರವ್ ಚೌಹಾಣ್ (20 ಲಕ್ಷ), ಸ್ವಪ್ನಿಲ್ ಸಿಂಗ್ (20 ಲಕ್ಷ); ಉಳಿದ ಮೊತ್ತ: 2.85 ಕೋಟಿ.
*ಚೆನ್ನೈ ಸೂಪರ್ಕಿಂಗ್ಸ್
ಡೆರಿಲ್ ಮಿಚೆಲ್ (14 ಕೋಟಿ), ಶಾರ್ದೂಲ್ ಠಾಕೂರ್ (4 ಕೋಟಿ), ರಚಿನ್ ರವೀಂದ್ರ (1.80 ಕೋಟಿ), ಸಮೀರ್ ರಿಜ್ವಿ (8.4 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ), ಅವಿನಾಶ್ ರಾವ್ (20 ಲಕ್ಷ). ಉಳಿದ ಮೊತ್ತ: 1 ಕೋಟಿ.
*ಡೆಲ್ಲಿ ಕ್ಯಾಪಿಟಲ್ಸ್
ಜೇ ರಿಚರ್ಡ್ಸನ್ (5 ಕೋಟಿ), ಕುಮಾರ್ ಕುಶಾಗ್ರ (7.20 ಕೋಟಿ), ಹ್ಯಾರಿ ಬ್ರೂಕ್ (4 ಕೋಟಿ), ಶೈ ಹೋಪ್ (75 ಲಕ್ಷ), ಟ್ರಿಸ್ಟಾನ್ ಸ್ಟಾಬ್ಸ್ (50 ಲಕ್ಷ), ರಸಿಕ್ ದಾರ್ (20 ಲಕ್ಷ), ರಿಕಿ ಭುಯಿ (20 ಲಕ್ಷ), ಸಮಿತ್ ಕುಮಾರ್ (1 ಕೋಟಿ), ಸ್ವಸ್ತಿಕ್ ಚಿಕರ (20 ಲಕ್ಷ); ಉಳಿದ ಮೊತ್ತ: 9.90 ಕೋಟಿ.
*ಗುಜರಾತ್ ಟೈಟಾನ್ಸ್
ಸ್ಪೆನ್ಸರ್ ಜಾನ್ಸರ್ (10 ಕೋಟಿ), ಶಾರುಖ್ ಖಾನ್ (7.40 ಕೋಟಿ), ಉಮೇಶ್ ಯಾದವ್ (5.80 ಕೋಟಿ), ಅಜ್ಮತ್ಉಲ್ಲಾ ಒಮರ್ಜಾಯಿ (50 ಲಕ್ಷ), ಸುಶಾಂತ್ ಮಿಶ್ರಾ (2.2 ಕೋಟಿ), ಕಾರ್ತಿಕ್ ತ್ಯಾಗಿ (60 ಲಕ್ಷ), ಮಾನವ್ ಸುಥರ್ (20 ಲಕ್ಷ), ರಾಬಿನ್ ಮಿಂಜ್ (3.60 ಕೋಟಿ). ಉಳಿದ ಮೊತ್ತ: 7.85 ಕೋಟಿ.
*ಕೋಲ್ಕತ ನೈಟ್ರೈಡರ್ಸ್
ಮಿಚೆಲ್ ಸ್ಟಾರ್ಕ್ (24.75 ಕೋಟಿ), ಮುಜೀಬ್ ರೆಹಮಾನ್ (2 ಕೋಟಿ), ಗಸ್ ಅಟ್ಕಿನ್ಸನ್ (1 ಕೋಟಿ), ಮನೀಷ್ ಪಾಂಡೆ (50 ಲಕ್ಷ), ಕೆಎಸ್ ಭರತ್ (50 ಲಕ್ಷ), ಚೇತನ್ ಸಕಾರಿಯ (50 ಲಕ್ಷ), ಅಂಗ್ಕೃಷ್ ರುವಂಶಿ (20 ಲಕ್ಷ), ರಮಣ್ದೀಪ್ ಸಿಂಗ್ (20 ಲಕ್ಷ), ಶೆಾರ್ನ್ ರುದರ್ೋರ್ಡ್ (1.50 ಕೋಟಿ), ಶಕೀಬ್ ಹುಸೈನ್ (20 ಲಕ್ಷ); ಉಳಿದ ಮೊತ್ತ: 1.35 ಕೋಟಿ.
*ಲಖನೌ ಸೂಪರ್ಜೈಂಟ್ಸ್
ಶಿವಂ ಮಾವಿ (6.40 ಕೋಟಿ), ಅರ್ಷಿನ್ ಕುಲಕರ್ಣಿ (20 ಲಕ್ಷ), ಎಂ. ಸಿದ್ಧಾರ್ಥ್ (2.40 ಕೋಟಿ), ಡೇವಿಡ್ ವಿಲ್ಲಿ (2 ಕೋಟಿ), ಆಶ್ಟನ್ ರ್ಟನರ್ (1 ಕೋಟಿ), ಅರ್ಷದ್ ಖಾನ್ (20 ಲಕ್ಷ). ಉಳಿದ ಮೊತ್ತ: 95 ಲಕ್ಷ.
*ಮುಂಬೈ ಇಂಡಿಯನ್ಸ್
ಗೆರಾಲ್ಡ್ ಕೋಟ್ಜೀ (5 ಕೋಟಿ), ದಿಲ್ಶಾನ್ ಮಧುಶಂಕ (4.60 ಕೋಟಿ), ಮೊಹಮದ್ ನಬಿ (1.50 ಕೋಟಿ), ಶ್ರೇಯಸ್ ಗೋಪಾಲ್ (20 ಲಕ್ಷ), ನುವಾನ್ ತುಷಾರ (4.80 ಕೋಟಿ), ಆಂಶುಲ್ ಕಂಬೋಜ್ (20 ಲಕ್ಷ), ನಮನ್ ಧೀರ್ (20 ಲಕ್ಷ), ಶಿವಾಲಿಕ್ ಶರ್ಮ (20 ಲಕ್ಷ); ಉಳಿದ ಮೊತ್ತ: 1.05 ಕೋಟಿ.
*ಪಂಜಾಬ್ ಕಿಂಗ್ಸ್
ಹರ್ಷಲ್ ಪಟೇಲ್ (11.75 ಕೋಟಿ), ರಿಲೀ ರೋಸೌ (8 ಕೋಟಿ), ಕ್ರಿಸ್ ವೋಕ್ಸ್ (4.20 ಕೋಟಿ), ತನಯ್ ತ್ಯಾಗರಾಜನ್ (20 ಲಕ್ಷ), ಶಶಾಂಕ್ ಸಿಂಗ್ (20 ಲಕ್ಷ), ವಿಶ್ವನಾಥ್ ಪ್ರತಾಪ್ ಸಿಂಗ್ (20 ಲಕ್ಷ), ಆಶುತೋಷ್ ಶರ್ಮ (20 ಲಕ್ಷ), ಪ್ರಿನ್ಸ್ ಚೌಧರಿ (20 ಲಕ್ಷ), ಉಳಿದ ಮೊತ್ತ: 4.15 ಕೋಟಿ.
*ರಾಜಸ್ಥಾನ ರಾಯಲ್ಸ್
ರೋವ್ಮನ್ ಪೊವೆಲ್ (7.40 ಕೋಟಿ), ಶುಭಂ ದುಬೆ (5.8 ಕೋಟಿ), ಟಾಮ್ ಕೊಹ್ಲರ್&ಕ್ಯಾಡ್ಮೋರ್ (40 ಲಕ್ಷ), ನಾಂಡ್ರೆ ರ್ಬಗರ್ (50 ಲಕ್ಷ), ಅಬಿದ್ ಮುಷ್ತಾಕ್ (20 ಲಕ್ಷ); ಉಳಿದ ಮೊತ್ತ: 20 ಲಕ್ಷ.
*ಸನ್ರೈಸರ್ಸ್ ಹೈದರಾಬಾದ್
ಪ್ಯಾಟ್ ಕಮ್ಮಿನ್ಸ್ (20.50 ಕೋಟಿ), ಟ್ರಾವಿಸ್ ಹೆಡ್ (6.80 ಕೋಟಿ), ಜೈದೇವ್ ಉನಾದ್ಕತ್ (1.60 ಕೋಟಿ), ವಾನಿಂದು ಹಸರಂಗ (1.50 ಕೋಟಿ), ಆಕಾಶ್ ಸಿಂಗ್ (20 ಲಕ್ಷ), ಜೆ. ಸುಬ್ರಮಣ್ಯನ್ (20 ಲಕ್ಷ). ಉಳಿದ ಮೊತ್ತ: 3.20 ಕೋಟಿ.