IPL 2026: ಮುಂದಿನ ವರ್ಷದ ಐಪಿಎಲ್ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು IPL 2026 ಮೆಗಾ ಆಕ್ಷನ್‌ಗೆ ಮುಂಚೆ 5 ಆಟಗಾರರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಹೌದು, ಕಳೆದ ಸೀಸನ್ನಲ್ಲಿ ಸಿಎಸ್ಕೆ ಪರ ಕಳಪೆ ಪ್ರದರ್ಶನ ನೀಡಿದ್ದ ಐವರನ್ನು ಇದೀಗ ಹರಾಜಿಗೂ ಮುನ್ನವೇ ಗೇಟ್ಪಾಸ್ ನೀಡಲು ನಿರ್ಧರಿಸಲಾಗಿದೆ.
ಸ್ಯಾಮ್ ಕರನ್ (Sam Curran) - ಆಲ್‌ರೌಂಡರ್
ಡೀಪಕ್ ಹೂಡಾ (Deepak Hooda) - ಆಲ್‌ರೌಂಡರ್
ರಾಹುಲ್ ತ್ರಿಪಾಠಿ (Rahul Tripathi) - ಬ್ಯಾಟ್ಸ್‌ಮನ್
ವಿಜಯ್ ಶಂಕರ್ (Vijay Shankar) - ಆಲ್‌ರೌಂಡರ್
ಡೆವನ್ ಕಾನ್ವೆ (Devon Conway) - ಓಪನರ್ ಬ್ಯಾಟ್ಸ್‌ಮನ್
ಈ ಬಿಡುಗಡೆಯಿಂದ CSK ತಂಡಕ್ಕೆ ಸುಮಾರು 25 ಕೋಟಿ ರೂ ಪಾವತಿಸಲ್ಪಡುವ ಮೊತ್ತ ಬಿಡುಗಡೆಯಾಗುತ್ತದೆ, ಇದು ಹೊಸ ಆಟಗಾರರನ್ನು ಖರೀದಿಸಲು ಸಹಾಯ ಮಾಡುತ್ತದೆ. CSK ನಿರ್ವಹಣೆ ಈ ವದಂತಿಗಳ ಬಗ್ಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದು, ಆದರೆ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ.(ಏಜೆನ್ಸೀಸ್)