ಕ್ರೀಡೆ

IPL 2024: ಬಹುನಿರೀಕ್ಷಿತ ಐಪಿಎಲ್ ಪಂದ್ಯಗಳಿಗೆ ದಿನಗಣನೆ! ಈ ನಗರದಲ್ಲಿ ನಡೆಯಲಿದೆ ಉದ್ಘಾಟನಾ ಸಮಾರಂಭ, ಇಲ್ಲಿವೆ 21 ದಿನಗಳ ವೇಳಾಪಟ್ಟಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ 2024ಕ್ಕೆ ಕ್ರಿಕೆಟ್ ಅಭಿಮಾನಿಗಳು ಸಜ್ಜಾಗಿದ್ದು, 10 ಬಲಿಷ್ಠ ತಂಡಗಳು ಭರ್ಜರಿ ಪೈಪೋಟಿ ಕೊಡಲು ಈಗಾಗಲೇ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಈ ಬಾರಿಯ ಐಪಿಎಲ್​ನ ಉದ್ಘಾಟನಾ ಸಮಾರಂಭ ಚೆನ್ನೈ ನಗರದಲ್ಲಿ ನಡೆಯಲಿದೆ ಎಂದು ಅಧಿಕೃತ ಘೋಷಣೆ ಹೊರಬಿದ್ದಿದೆ. ಇದರೊಟ್ಟಿಗೆ ಕೇವಲ 15 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದ್ದು, ಚುನಾವಣೆ ಪಟ್ಟಿ ಬಿಡುಗಡೆಯಾದ ಬಳಿಕ ಮುಂದಿನ ಪಟ್ಟಿ ರಿಲೀಸ್ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಐಪಿಎಲ್ 2024 ಮಾರ್ಚ್ 22ರಂದು ಪ್ರಾರಂಭವಾಗಲಿದೆ ಮತ್ತು ಮೇ 26ರಂದು ಮುಕ್ತಾಯಗೊಳ್ಳಲಿದೆ ಎಂದು ವರದಿಯಾಗಿದೆ. 2023ರ ಆವೃತ್ತಿಯಂತೆಯೇ ಈ ವರ್ಷ 74 ಪಂದ್ಯಗಳನ್ನು ಆಡಿಸಲಿದ್ದು, ಕಳೆದ ವರ್ಷ ಕೇವಲ 60 ದಿನಗಳು ನಡೆಸಲಾಗಿತ್ತು. ಆದರೆ ಈ ಸೀಸನ್​ನಲ್ಲಿ 60ರ ಬದಲಿಗೆ 67 ದಿನಗಳ ಕಾಲ ನಡೆಯಲಿವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.

ಸಾರ್ವತ್ರಿಕ ಚುನಾವಣೆಯ ಕಾರಣ ಐಪಿಎಲ್ ಪಂದ್ಯಗಳಿಗೆ ಅಡಚಣೆ ಉಂಟಾಗಲಿದ್ದು, ಒಂದು ವಾರ ವಿಸ್ತರಣೆಯಾಗಿದೆ. ಕಳೆದ ಬಾರಿ 2019ರಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದಾಗ ಇದೇ ವಿಧಾನವನ್ನು ಅನುಸರಿಸಲಾಯಿತು ಮತ್ತು ಪಂದ್ಯಗಳನ್ನು ಎರಡು ಭಾಗಗಳಲ್ಲಿ ಘೋಷಿಸಲಾಗಿದೆ.

ಐಪಿಎಲ್ 2024ರಲ್ಲಿ ಆಡಲಿರುವ 10 ತಂಡಗಳಿವು: ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್,(ಏಜೆನ್ಸೀಸ್).

ಇಲ್ಲಿವೆ ಮುಂದಿನ 21 ದಿನಗಳ ಐಪಿಎಲ್ ಪಂದ್ಯಗಳ ವೇಳಾಪಟ್ಟಿ....