More

    ಹೂಡಿಕೆದಾರರಿಗೆ ದೊಡ್ಡ ಲಾಭ ನೀಡಿದ ಸ್ಮಾಲ್​ ಕ್ಯಾಪ್​: ಷೇರು ಬೆಲೆ ಒಂದೇ ತಿಂಗಳಲ್ಲಿ 162% ಏರಿಕೆಯಾಗಿದ್ದೇಕೆ?

    ಮುಂಬೈ: ಸಿವಿಲ್ ನಿರ್ಮಾಣ ವಲಯದ ಸ್ಮಾಲ್ ಕ್ಯಾಪ್ ಕಂಪನಿ ಪ್ರೋಮ್ಯಾಕ್ಸ್ ಪವರ್ ಲಿಮಿಟೆಡ್​ (Promax Power Ltd.) ಕಂಪನಿಯ ಷೇರುಗಳು ಕಳೆದ 30 ದಿನಗಳಲ್ಲಿ 162% ಏರಿಕೆಯಾಗಿವೆ. ಕಳೆದೊಂದು ವಾರದಲ್ಲಿ ಈ ಷೇರುಗಳ ಬೆಲೆ 27.48% ಹೆಚ್ಚಳವಾಗಿದೆ. ಈ ಕಂಪನಿಯು ಬೋನಸ್​ ಷೇರು ನೀಡಲು ಮುಂದಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

    ಕಂಪನಿಯು 1:1 ರ ಅನುಪಾತದಲ್ಲಿ ಬೋನಸ್ ಷೇರನ್ನು ಶಿಫಾರಸು ಮಾಡಿದೆ. ಅಂದರೆ, ಷೇರುದಾರರು ಹೊಂದಿರುವ ಪ್ರತಿ 1 ಷೇರಿಗೆ 1 ಬೋನಸ್ ಷೇರನ್ನು ಪಡೆಯಲು ಅರ್ಹರಾಗಿರುತ್ತಾರೆ. ಕಂಪನಿಯು ಇನ್ನೂ 1:1 ಬೋನಸ್ ಷೇರಿಗೆ ದಾಖಲೆಯ ದಿನಾಂಕವನ್ನು ಪ್ರಕಟಿಸಬೇಕಾಗಿದೆ.

    ಗುರುವಾರದ ವಹಿವಾಟಿನಲ್ಲಿ ಷೇರುಗಳ ಬೆಲೆ ಶೇ. 5ರಷ್ಟು ಏರಿಕೆಯಾಗಿ, 152.77 ರೂಪಾಯಿ ತಲುಪಿತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ಕೂಡ ಆಗಿದೆ.

    ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆ ರೂ 34.37 ಆಗಿದೆ. ಕಂಪನಿಯು ರೂ 173.38 ಕೋಟಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಕಳೆದ 2 ವಾರಗಳಲ್ಲಿ ಪ್ರೋಮ್ಯಾಕ್ಸ್ ಪವರ್ ಷೇರುಗಳು 86% ನಷ್ಟು ಲಾಭವನ್ನು ನೀಡಿವೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ 156% ರಷ್ಟು ಏರಿಕೆಯಾಗಿವೆ. ಕಳೆದ 6 ತಿಂಗಳಲ್ಲಿ 259% ಏರಿಕೆಯಾಗಿವೆ. ಅಲ್ಲದೆ, ಕಳೆದ 1 ವರ್ಷದಲ್ಲಿ 225% ನಷ್ಟು ಏರಿಕೆಯಾಗಿವೆ.

    ಪ್ರೋಮ್ಯಾಕ್ಸ್ ಕಾರ್ಬೊಂಟಿಯರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪ್ರೋಮ್ಯಾಕ್ಸ್ ಪವರ್ 24% ಪಾಲನ್ನು ಪಡೆದುಕೊಂಡಿದೆ: ಕಂಪನಿಯು ತನ್ನ ಫೆಬ್ರವರಿ 5, 2024 ರ ನಿಯಂತ್ರಕ ಫೈಲಿಂಗ್‌ನಲ್ಲಿ ಪ್ರೋಮ್ಯಾಕ್ಸ್ ಕಾರ್ಬೊಂಟಿಯರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ 24% ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ತಿಳಿಸಿದೆ.

    ಈ ಕಂಪನಿಯನ್ನು 2004 ರಲ್ಲಿ ಸ್ಥಾಪಿಸಲಾಗಿದೆ. ಇದು ಟರ್ನ್‌ಕೀ ಪವರ್, ಸಬ್‌ಸ್ಟೇಷನ್, ಟ್ರಾನ್ಸ್‌ಮಿಷನ್ ಲೈನ್, ಹೈಡ್ರೋ, ವಿತರಣೆ, ವಿದ್ಯುದ್ದೀಕರಣ, ಸಿವಿಲ್ ನಿರ್ಮಾಣ, ಪೂರ್ವ-ಇಂಜಿನಿಯರ್​ಡ್​ ಕಟ್ಟಡ, ಎತ್ತರದ ಕಟ್ಟಡ, ಒಳಚರಂಡಿ ಮತ್ತು ನೀರು ಸಂಸ್ಕರಣಾ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ತೊಡಗಿಸಿಕೊಂಡಿದೆ. ಇದು ತನ್ನ ಗ್ರಾಹಕರಿಗೆ ವೃತ್ತಿಪರ ಪರಿಹಾರಗಳು, ವಿನ್ಯಾಸ ಮತ್ತು ಇಂಜಿನಿಯರಿಂಗ್ ಸೇವೆಗಳನ್ನು ನೀಡುತ್ತದೆ.

    ರೂ 316 ಕೋಟಿ ಸಂಗ್ರಹಿಸಲು ಷೇರು/ವಾರೆಂಟ್‌ ನೀಡಲು ಸ್ಪೈಸ್​ಜೆಟ್​ ಅನುಮೋದನೆ

    3ರಿಂದ 900 ರೂಪಾಯಿ ಏರಿಕೆ ಕಂಡ ಐಟಿ ಷೇರು; ಡೈನಾಕಾನ್ಸ್ ಸಿಸ್ಟಮ್ಸ್ ಸ್ಟಾಕ್​ ಬೆಲೆ ನಿರಂತರ ಏರಿಕೆ

    ಹೂಡಿಕೆದಾರರಿಗೊಂದು ಸುವರ್ಣಾವಕಾಶ: ಎಲೆಕ್ಟ್ರಿಕ್​ ವೆಹಿಕಲ್ ಚಾರ್ಜರ್ ಕಂಪನಿ ಐಪಿಒ ಫೆ. 27ರಿಂದ; ಗ್ರೇ ಮಾರ್ಕೆಟ್​ನಲ್ಲಿ 55 ರೂ ಪ್ರೀಮಿಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts