More

    ಕೇವಲ 4 ವರ್ಷದಲ್ಲಿ 1 ಲಕ್ಷವಾಯ್ತು ಕೋಟಿ ರೂಪಾಯಿ: ಹೂಡಿಕೆದಾರರನ್ನು ಕುಬೇರರನ್ನಾಗಿಸಿದ ಮಿಡ್-ಕ್ಯಾಪ್ ಸ್ಟಾಕ್

    ಮುಂಬೈ: ಕೋವಿಡ್ ನಂತರ, ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದ ಹಲವು ಷೇರುಗಳಿವೆ. ಅಂತಹ ಮಲ್ಟಿಬ್ಯಾಗರ್ ಸ್ಟಾಕ್ ಟ್ರಾನ್ಸ್‌ಫಾರ್ಮರ್ಸ್ ಮತ್ತು ರೆಕ್ಟಿ ಫೈರ್ಸ್ (ಇಂಡಿಯಾ) ಲಿಮಿಟೆಡ್ (TRIL). ಮಂಗಳವಾರ ಈ ಷೇರುಗಳಲ್ಲಿ ಭಾರೀ ಮಾರಾಟ ಕಂಡುಬಂದಿದ್ದರೂ, ಕಳೆದ ಕೆಲವು ವರ್ಷಗಳಲ್ಲಿ ಇದು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಮೇ 2020 ರಲ್ಲಿ ಎನ್‌ಎಸ್‌ಇಯಲ್ಲಿ ಪ್ರತಿ ಷೇರಿಗೆ ರೂ 6.30 ಕ್ಕೆ ತಲುಪಿದ ನಂತರ, ಈ ಸ್ಟಾಕ್ ಚೇತರಿಕೆಯ ಹಾದಿಯಲ್ಲಿ ಸಾಗಿತು. ಈಗ ಈ ಷೇರಿನ ಬೆಲೆ ರೂ 626 ಆಗಿದೆ. ಈ ಮೂಲಕ ಅಂದಾಜು ನಾಲ್ಕು ವರ್ಷಗಳಲ್ಲಿ ಸ್ಟಾಕ್ 100 ಪಟ್ಟು ಹೆಚ್ಚಾಗಿದೆ.

    TRIL ಷೇರುಗಳ ಬೆಲೆ ಒಂದು ತಿಂಗಳಲ್ಲಿ ರೂ. 415.50 ರಿಂದ ರೂ. 626.50 ಕ್ಕೆ ಏರಿಕೆಯಾಗಿದೆ. ಇದರಿಂದ ಷೇರುದಾರರಿಗೆ 50 ಪ್ರತಿಶತದಷ್ಟು ಲಾಭ ದೊರೆತಿದೆ. ಈ ಮಿಡ್-ಕ್ಯಾಪ್ ಸ್ಟಾಕ್ ಬೆಲೆ ಈ ವರ್ಷದ ಆರಂಭದಿಂದ ಇದುವರೆಗೆ ರೂ 238 ರಿಂದ ರೂ 626.50 ಕ್ಕೆ ಏರಿದೆ, ಅಂದರೆ, 2024 ರಲ್ಲಿ ಇದುವರೆಗೆ ಶೇಕಡಾ 160 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ಕಳೆದ ಆರು ತಿಂಗಳಲ್ಲಿ TRIL ಷೇರಿನ ಬೆಲೆ ರೂ. 161 ರಿಂದ ರೂ. 626.50 ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಷೇರುಗಳ ಬೆಲೆ ಅಂದಾಜು 300 ಪ್ರತಿಶತದಷ್ಟು ಏರಿಕೆ ದಾಖಲಿಸಿದೆ. ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ 67.30 ರಿಂದ 626.50 ಕ್ಕೆ ಏರಿದೆ, ಇದು ಅಂದಾಜು 850 ಪ್ರತಿಶತದಷ್ಟು ಲಾಭವನ್ನು ಪ್ರತಿನಿಧಿಸುತ್ತದೆ.

    TRIL ಷೇರಿನ ಬೆಲೆಯು ಮೇ 2020 ರಲ್ಲಿ ಪ್ರತಿ ಷೇರಿಗೆ ರೂ. 6.30 ತಲುಪಿತ್ತು. ಈಗ ಷೇರು ಬೆಲೆ ರೂ. 626.50 ತಲುಪಿದೆ. ಅಂದರೆ ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಷೇರುದಾರರಿಗೆ 100 ಪಟ್ಟು ಲಾಭ ನೀಡಿದೆ. ಕೋವಿಡ್ ಪರಿಸರದಲ್ಲಿ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅವರ ಮೊತ್ತವು ಈತ ರೂ. 1 ಕೋಟಿಗೆ ಮುಟ್ಟಿತ್ತಿತ್ತು.

    ಹೂಡಿಕೆದಾರರು 6 ತಿಂಗಳ ಹಿಂದೆ TRIL ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅವರ ಹಣ ರೂ. 4 ಲಕ್ಷಕ್ಕೆ ಏರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಈಗ ಅದು ರೂ. 9.50 ಲಕ್ಷವಾಗುತ್ತದೆ.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 769.10 ಮತ್ತು ಕನಿಷ್ಠ ಬೆಲೆ ರೂ. 63.05 ಆಗಿದೆ.

    ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು

    ದೊಡ್ಡ ಡೀಲ್​ ಮಾಡಿಕೊಂಡ ಏರ್​ಪೋರ್ಟ್​ ಸಂಬಂಧಿ ಕಂಪನಿ: ಷೇರು ಬೆಲೆ ಏರಲಿದೆ ಎನ್ನುತ್ತಾರೆ ತಜ್ಞರು

    ಬೆಂಗಳೂರಿನ ಫೈನಾನ್ಸ್ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಹೆಚ್ಚಳವಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts