More

    3ರಿಂದ 900 ರೂಪಾಯಿ ಏರಿಕೆ ಕಂಡ ಐಟಿ ಷೇರು; ಡೈನಾಕಾನ್ಸ್ ಸಿಸ್ಟಮ್ಸ್ ಸ್ಟಾಕ್​ ಬೆಲೆ ನಿರಂತರ ಏರಿಕೆ

    ಮುಂಬೈ: ಐಟಿ ಸೇವಾ ನಿರ್ವಹಣಾ ಕಂಪನಿ ಡೈನಾಕಾನ್ಸ್ ಸಿಸ್ಟಮ್ಸ್ ಆ್ಯಂಡ್​ ಸೋಲುಷನ್ಸ್​ ಲಿಮಿಟೆಡ್​ (Dynacons Systems and Solutions Ltd.) ಷೇರುಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿವೆ. ಡೈನಾಕಾನ್ಸ್ ಸಿಸ್ಟಮ್ಸ್ ಅಂಡ್ ಸೊಲ್ಯೂಷನ್ಸ್ ಷೇರುಗಳ ಬೆಲೆ ಗುರುವಾರ ಶೇ. 6ರಷ್ಟು ಏರಿಕೆ ಕಾಣುವ ಮೂಲಕ 916.65 ರೂ. ತಲುಪಿದೆ.

    ಈ ಕಂಪನಿಯ ಷೇರುಗಳಿಗೆ ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರದ ಕನಿಷ್ಠ ಬೆಲೆ 283.30 ರೂ. ಆಗಿದೆ. ಕಳೆದ 10 ವರ್ಷಗಳಲ್ಲಿ ಡೈನಾಕಾನ್ಸ್ ಸಿಸ್ಟಮ್ಸ್ ಷೇರುಗಳ ಬೆಲೆ 3 ರೂಪಾಯಿಯಿಂದ 900 ರೂಪಾಯಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ಶೇಕಡಾ 29000 ಕ್ಕಿಂತ ಹೆಚ್ಚು ಏರಿಕೆಯಾಗಿದೆ.

    ಕಂಪನಿಯ ಷೇರುಗಳ ಬೆಲೆ 28 ಫೆಬ್ರವರಿ 2014 ರಂದು 3 ರೂ. ಇತ್ತು. ಈಗ ಅದು ರೂ 916.65 ತಲುಪಿದೆ. ಈ ಅವಧಿಯಲ್ಲಿ 29700% ಏರಿಕೆ ದಾಖಲಿಸಿದೆ. ಒಬ್ಬ ವ್ಯಕ್ತಿ 10 ವರ್ಷಗಳ ಹಿಂದೆ ಡೈನಾಕಾನ್ಸ್ ಸಿಸ್ಟಮ್ಸ್ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಅದನ್ನು ಇದುವರೆಗೂ ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯ 3.05 ಕೋಟಿ ರೂಪಾಯಿ ಆಗುತ್ತಿತ್ತು.

    ಕಳೆದ 4 ವರ್ಷಗಳಲ್ಲಿ ಈ ಷೇರುಗಳ ಬೆಲೆ 6000% ಕ್ಕಿಂತ ಹೆಚ್ಚು ಏರಿಕೆಯಾಗಿದೆ. 27 ಮಾರ್ಚ್ 2020 ರಂದು ಕಂಪನಿಯ ಷೇರುಗಳ ಬೆಲೆ 14.35 ರೂ. ಇತ್ತು. ಕಳೆದ ಒಂದು ವರ್ಷದಲ್ಲಿ ಡೈನಾಕಾನ್ಸ್ ಸಿಸ್ಟಮ್ಸ್ ಷೇರುಗಳ ಬೆಲೆ 130% ಹೆಚ್ಚಾಗಿದೆ. ಈ ಅವಧಿಯಲ್ಲಿ ಷೇರುಗಳ ಬೆಲೆ ರೂ. 401.65ರಿಂದ ರೂ. 916.65ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಕಂಪನಿಯ ಷೇರುಗಳ ಬೆಲೆ ಶೇಕಡಾ 45ಕ್ಕೂ ಹೆಚ್ಚು ಏರಿಕೆ ಕಂಡಿದೆ.

    1995 ರಲ್ಲಿ ಸ್ಥಾಪಿತವಾದ ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್ ಲಿಮಿಟೆಡ್ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿ ಮತ್ತು ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವ ಐಟಿ ಕಂಪನಿಯಾಗಿದೆ.

    ಹೂಡಿಕೆದಾರರಿಗೊಂದು ಸುವರ್ಣಾವಕಾಶ: ಎಲೆಕ್ಟ್ರಿಕ್​ ವೆಹಿಕಲ್ ಚಾರ್ಜರ್ ಕಂಪನಿ ಐಪಿಒ ಫೆ. 27ರಿಂದ; ಗ್ರೇ ಮಾರ್ಕೆಟ್​ನಲ್ಲಿ 55 ರೂ ಪ್ರೀಮಿಯಂ

    ಅಪ್ಪರ್​ ಸರ್ಕ್ಯೂಟ್​ ಹಿಟ್​, 52 ವಾರಗಳ ಗರಿಷ್ಠ ಬೆಲೆ: ಎಬಿಬಿ ಇಂಡಿಯಾ ಷೇರುಗಳ ಬೆಲೆ ಗಗನಕ್ಕೆ

    70% ಡಿವಿಡೆಂಡ್, 2:1 ಬೋನಸ್ ಷೇರು: ಮಲ್ಟಿಬ್ಯಾಗರ್ ಆದಾಯ ನೀಡಿದ ರಕ್ಷಣಾ ಕಂಪನಿ ಷೇರು ಖರೀದಿಗೆ ಬ್ರೋಕರೇಜ್​ ಸಂಸ್ಥೆಯ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts