More

    ಅಪ್ಪರ್​ ಸರ್ಕ್ಯೂಟ್​ ಹಿಟ್​, 52 ವಾರಗಳ ಗರಿಷ್ಠ ಬೆಲೆ: ಎಬಿಬಿ ಇಂಡಿಯಾ ಷೇರುಗಳ ಬೆಲೆ ಗಗನಕ್ಕೆ

    ನವದೆಹಲಿ: ಎಬಿಬಿ ಇಂಡಿಯಾ ಲಿಮಿಟೆಡ್ (ABB India Ltd.)​ ಕಂಪನಿಯ ಷೇರುಗಳ ಬೆಲೆ ಬುಧವಾರ ಅಪ್ಪರ್​ ಸರ್ಕ್ಯೂಟ್​ ಹಿಟ್​ ಮಾಡಿತು. ಅಲ್ಲದೆ, 52 ವಾರಗಳ ಗರಿಷ್ಠ ಬೆಲೆಯನ್ನೂ ತಲುಪಿತು.

    ಡಿಸೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ತೆರಿಗೆಯ ನಂತರದ ಲಾಭದಲ್ಲಿ ಏರಿಕೆಯನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳ ಬೆಲೆ ಏರುಗತಿಯಲ್ಲಿ ಸಾಗಿದೆ. ಈ ಕಂಪನಿಯ ಷೇರುಗಳ ಬೆಲೆ 10.17 ರಷ್ಟು ಏರಿಕೆಯಾಗಿ 4,984.70 ರೂಪಾಯಿ ತಲುಪಿದೆ.

    ಎಬಿಬಿ ಇಂಡಿಯಾ ತನ್ನ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಲು ಕ್ಯಾಲೆಂಡರ್ ವರ್ಷವನ್ನು ಅನುಸರಿಸುತ್ತದೆ. ಕಳೆದ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 339 ಕೋಟಿ ರೂ. ನಿವ್ವಳ ಲಾಭವನ್ನು ಈ ಕಂಪನಿ ವರದಿ ಮಾಡಿದೆ. ವಿದ್ಯುದೀಕರಣ ಮತ್ತು ಯಾಂತ್ರೀಕೃತಗೊಂಡ ಈ ಬೃಹತ್​ ಕಂಪನಿಯ ನಿವ್ವಳ ಲಾಭವು ಹಿಂದಿನ ವರ್ಷದ ಅವಧಿಯ ರೂ. 305.3 ಕೋಟಿಗೆ ಹೋಲಿಸಿದರೆ ಶೇಕಡಾ 10 ರಷ್ಟು ಏರಿಕೆಯಾಗಿದೆ.

    ಇದೇ ಅವಧಿಯಲ್ಲಿ ಕಾರ್ಯಾಚರಣೆಗಳ ಆದಾಯವು ಶೇಕಡಾ 13.6 ರಷ್ಟು ಏರಿಕೆಯಾಗಿ 2,757.5 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.2,427 ಕೋಟಿ ಆದಾಯ ಇತ್ತು.

    ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಆರ್ಡರ್‌ಗಳು ಶೇ 35ರಷ್ಟು ಏರಿಕೆಯಾಗಿ ರೂ. 3,147 ಕೋಟಿಗೆ ತಲುಪಿದೆ. 2023 ರಲ್ಲಿ, ಕಂಪನಿಯು 12,319 ಕೋಟಿ ರೂ. ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಇದು 2022 ಕ್ಕಿಂತ 23 ರಷ್ಟು ಹೆಚ್ಚಾಗಿದೆ.

    “ನಮ್ಮ ಗ್ರಾಹಕರು ನಮ್ಮ ಮೌಲ್ಯವರ್ಧನೆ ವಿದ್ಯುದ್ದೀಕರಣ ಮತ್ತು ಯಾಂತ್ರೀಕೃತಗೊಂಡ ಉತ್ಪನ್ನಗಳು, ಪರಿಹಾರಗಳು ಮತ್ತು ಸೇವೆಗಳಲ್ಲಿ ಇರಿಸಿರುವ ನಿರಂತರ ವಿಶ್ವಾಸಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಎಬಿಬಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಶರ್ಮಾ ಹೇಳಿದ್ದಾರೆ.

    ತ್ರೈಮಾಸಿಕದಲ್ಲಿ ಬೆಳವಣಿಗೆಗೆ ಕೊಡುಗೆ ನೀಡಿದ ವಲಯಗಳಲ್ಲಿ ರೈಲ್ವೇಗಳು, ಲೋಹಗಳು, ದತ್ತಾಂಶ ಕೇಂದ್ರಗಳು, ಸಿಮೆಂಟ್, ವಿಶೇಷ ರಾಸಾಯನಿಕಗಳು ಮತ್ತು ನಿರ್ಮಾಣ ಯಂತ್ರಗಳು ಸೇರಿವೆ ಎಂದು ಕಂಪನಿ ಹೇಳಿದೆ.

    ದೇಶೀಯ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಯು ABB ಇಂಡಿಯಾದ ಆದಾಯವು ಬ್ರೋಕರೇಜ್‌ಗಳ ಪ್ರಕ್ಷೇಪಗಳಿಗಿಂತ ಕಡಿಮೆಯಿದ್ದರೂ, ಅದರ ಲಾಭವು ನಿರೀಕ್ಷೆಗಳನ್ನು ಮೀರಿದೆ ಎಂದು ಹೇಳಿದೆ.

    ಈ ಕಂಪನಿಯು ವಿದ್ಯುತ್​ ಉತ್ಪಾದನೆ, ವಿದ್ಯುತ್ ಪ್ರಸರಣ, ಸಾರಿಗೆ, ಮಾಲಿನ್ಯ ನಿಯಂತ್ರಣ ಕ್ಷೇತ್ರದ ಯೋಜನೆಗಳನ್ನು ಕೈಗೊಳ್ಳುತ್ತದೆ. ಎಬಿಬಿ ಇಂಡಿಯಾದ ಉತ್ಪನ್ನಗಳಲ್ಲಿ ಮಾಲಿನ್ಯ ನಿಯಂತ್ರಣ ಉಪಕರಣಗಳು, ಸ್ವಿಚ್ ಗೇರ್‌ಗಳು ಮತ್ತು ಹೈ ಕರೆಂಟ್ ರೆಕ್ಟಿಫೈಯರ್‌ಗಳು ಸೇರಿವೆ.

    70% ಡಿವಿಡೆಂಡ್, 2:1 ಬೋನಸ್ ಷೇರು: ಮಲ್ಟಿಬ್ಯಾಗರ್ ಆದಾಯ ನೀಡಿದ ರಕ್ಷಣಾ ಕಂಪನಿ ಷೇರು ಖರೀದಿಗೆ ಬ್ರೋಕರೇಜ್​ ಸಂಸ್ಥೆಯ ಸಲಹೆ

    ಸತತ 4ನೇ ದಿನವೂ ಅಪ್ಪರ್ ಸರ್ಕ್ಯೂಟ್‌ ಹೊಡೆದ ಪೇಟಿಎಂ ಷೇರುಗಳು: ಪಾತಾಳ ಮುಟ್ಟಿದ ಸ್ಟಾಕ್​ ಬೆಲೆ ಈಗ ಹೆಚ್ಚುತ್ತಿರುವುದೇಕೆ?

    2000 ಕೋಟಿ ರೂಪಾಯಿ ಹೇರಾಪೇರಿ ಪತ್ತೆ ಮಾಡಿದ ಸೆಬಿ: ಝೀ ಎಂಟರ್‌ಟೈನ್‌ಮೆಂಟ್ ಷೇರು ಕುಸಿತ ಕಂಡು ಲೋವರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts