More

    ಸತತ 4ನೇ ದಿನವೂ ಅಪ್ಪರ್ ಸರ್ಕ್ಯೂಟ್‌ ಹೊಡೆದ ಪೇಟಿಎಂ ಷೇರುಗಳು: ಪಾತಾಳ ಮುಟ್ಟಿದ ಸ್ಟಾಕ್​ ಬೆಲೆ ಈಗ ಹೆಚ್ಚುತ್ತಿರುವುದೇಕೆ?

    ನವದೆಹಲಿ: ಪೇಟಿಎಂ (Paytm) ಬ್ರಾಂಡ್‌ನ ಮಾಲೀಕತ್ವ ಹೊಂದಿರುವ One97 ಕಮ್ಯುನಿಕೇಷನ್ಸ್‌ನ ಷೇರುಗಳು ಬುಧವಾರ ಸತತ ನಾಲ್ಕನೇ ಸೆಷನ್‌ಗೆ ಅಪ್ಪರ್ ಸರ್ಕ್ಯೂಟ್‌ಗೆ ಅಪ್ಪಳಿಸಿದವು. ಸತತ ನಾಲ್ಕನೇ ವಹಿವಾಟಿನ ದಿನವಾದ ಬುಧವಾರ ಕೂಡ ಈ ಷೇರುಗಳ ಬೆಲೆ ಗರಿಷ್ಠ ಹೆಚ್ಚಳ ಮಿತಿಯನ್ನು ಮುಟ್ಟಿತು.

    ಈ ಷೇರುಗಳ ಬೆಲೆ ಕ್ರಮವಾಗಿ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ತಲಾ 5 ಪ್ರತಿಶತದಷ್ಟು ಏರಿಕೆಯಾಗಿ ರೂ 395.25 ಮತ್ತು ರೂ 395.05 ತಲುಪಿತು.

    ಆರ್​ಬಿಐ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪೇಟಿಎಂ ಷೇರುಗಳ ಬೆಲೆ ಸಾಕಷ್ಟು ಕುಸಿತವನ್ನು ಕಂಡಿತ್ತು. ತದನಂತರ ಶುಕ್ರವಾರದಿಂದ ಈ ಷೇರುಗಳ ಬೆಲೆ ಏರುಗತಿಯಲ್ಲಿದೆ. ಕಳೆದ ಗುರುವಾರದಿಂದ ಇದುವರೆಗೆ ಈ ಷೇರು ಬೆಲೆ ಶೇಕಡಾ 21ರಷ್ಟು ಹೆಚ್ಚಳ ಕಂಡಿದೆ.

    ಬಿಕ್ಕಟ್ಟಿಗೆ ಸಿಲುಕಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ವಿದೇಶಿ ವಿನಿಮಯ ನಿಯಮಗಳ ಯಾವುದೇ ಉಲ್ಲಂಘನೆಯನ್ನು ಕಂಡುಹಿಡಿದಿಲ್ಲ ಎಂಬ ವರದಿಗಳ ಹಿನ್ನೆಲೆಎಯಲ್ಲಿ One97 ಕಮ್ಯುನಿಕೇಷನ್‌ನ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

    ಆದರೂ, ಈ ಕೇಂದ್ರೀಯ ಸಂಸ್ಥೆಯು ನೋ-ಯುವರ್-ಕನ್ಸೂಮರ್​ (KYC) ಮಾನದಂಡಗಳಲ್ಲಿ ಕೆಲವು ಲೋಪದೋಷಗಳನ್ನು ಮತ್ತು ಅನುಮಾನಾಸ್ಪದ ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಹಿಡಿದಿದೆ. ಕಳೆದ ವಾರ, ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಿಪಿಬಿಎಲ್‌ನ ಸಾಗರೋತ್ತರ ವಹಿವಾಟಿನ ಬಗ್ಗೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು.

    ಜನವರಿ 31 ರ ಆದೇಶದ ಪ್ರಕಾರ, ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಫಾಸ್ಟ್ಯಾಗ್‌ಗಳು ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳಲ್ಲಿ ಹೆಚ್ಚಿನ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ನಿಲ್ಲಿಸಲು PPBL ಗೆ ಆರ್​ಬಿಐ ಸೂಚಿಸಿತ್ತು. ನಂತರ, ಕೇಂದ್ರ ಬ್ಯಾಂಕ್ ಮಾರ್ಚ್ 15ರವರೆಗೆ ಈ ಗಡುವನ್ನು ವಿಸ್ತರಿಸಿದೆ.

    ಪಿಪಿಬಿಎಲ್ ವಿರುದ್ಧ ಭಾರತೀಯ ರಿಸರ್ವ್​ ಬ್ಯಾಂಕ್ (ಆರ್‌ಬಿಐ) ಕ್ರಮದ ನಂತರ ಒನ್ 97 ಕಮ್ಯುನಿಕೇಷನ್ ಷೇರುಗಳ ಬೆಲೆ ಕಳೆದೊಂದು ತಿಂಗಳಲ್ಲಿ ಸಾಕಷ್ಟು ಕುಸಿತವನ್ನು ಕಂಡಿದೆ.

    ಆದರೆ, ಯಾವುದೇ ಉಲ್ಲಂಘನೆಯನ್ನು ಇಡಿ ಪತ್ತೆ ಮಾಡಿಲ್ಲ ಎಂಬ ವರದಿಗಳ ನಂತರ ಷೇರು ಬೆಲೆ ಮತ್ತೆ ಹೆಚ್ಚಳವಾಗತೊಡಗಿದೆ. ಸೋಮವಾರದಂದು ಷೇರುಗಳ ಬೆಲೆ ಅಪ್ಪರ್ ಸರ್ಕ್ಯೂಟ್ ಮಿತಿಯನ್ನು ಮುಟ್ಟಿತ್ತು. ಮಂಗಳವಾರ ಕೂಡ ಈ ಷೇರುಗಳ ಬೆಲೆ ಶೇಕಡಾ 5 ರಷ್ಟು ಏರಿಕೆ ಕಂಡಿತ್ತು.

    2000 ಕೋಟಿ ರೂಪಾಯಿ ಹೇರಾಪೇರಿ ಪತ್ತೆ ಮಾಡಿದ ಸೆಬಿ: ಝೀ ಎಂಟರ್‌ಟೈನ್‌ಮೆಂಟ್ ಷೇರು ಕುಸಿತ ಕಂಡು ಲೋವರ್​ ಸರ್ಕ್ಯೂಟ್​ ಹಿಟ್​

    6 ದಿನಗಳ ಏರುಪ್ರವೃತ್ತಿಗೆ ಭಂಗ ತಂದ ಕರಡಿ ಕುಣಿತ: 434 ಅಂಕ ಕುಸಿತ ಕಂಡ ಸೂಚ್ಯಂಕ

    ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದ ಟಾಟಾ ಇನ್ವೆಸ್ಟ್‌ಮೆಂಟ್ ಷೇರು: ವರ್ಷದಲ್ಲಿ 206%; ತಿಂಗಳಲ್ಲಿ 43 % ಲಾಭ ನೀಡಿದ ಸ್ಟಾಕ್​ಗೆ ಅಪಾರ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts