More

    2000 ಕೋಟಿ ರೂಪಾಯಿ ಹೇರಾಪೇರಿ ಪತ್ತೆ ಮಾಡಿದ ಸೆಬಿ: ಝೀ ಎಂಟರ್‌ಟೈನ್‌ಮೆಂಟ್ ಷೇರು ಕುಸಿತ ಕಂಡು ಲೋವರ್​ ಸರ್ಕ್ಯೂಟ್​ ಹಿಟ್​

    ನವದೆಹಲಿ: ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಖಾತೆಗಳಲ್ಲಿ 240 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚಿನ ಹಣ ಸೋರಿಕೆಯಾಗಿರುವುದನ್ನು ಸೆಬಿ ಕಂಡುಹಿಡಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳು ಸಾಕಷ್ಟು ಕುಸಿತ ಕಂಡು ಲೋವರ್​ ಸರ್ಕ್ಯೂಟ್ ಹಿಟ್​ ಆದವು.

    ಬಂಡವಾಳ ಮಾರುಕಟ್ಟೆ ನಿಯಂತ್ರಕವಾದ ಸೆಬಿಯು (ಭಾರತೀಯ ಷೇರು ವಿನಿಯಮ ಮಂಡಳಿ) 241 ಮಿಲಿಯನ್ ಡಾಲರ್​ (ಅಂದಾಜು 2,000 ಕೋಟಿ ರೂಪಾಯಿ) ಗಿಂತ ಹೆಚ್ಚಿನ ಆರ್ಥಿಕ ವ್ಯತ್ಯಾಸವನ್ನು ಕಂಡುಹಿಡಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಷೇರುಗಳ ಬೆಲೆ ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 12 ರಷ್ಟು ಕುಸಿತ ಕಂಡವು.

    ಈ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 11.58 ಪ್ರತಿಶತ ಕುಸಿದು 170.65 ರೂಪಾಯಿಗೆ ಮುಟ್ಟಿದ್ದವು. ಮಧ್ಯಾಹ್ನದ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಲೋವರ್​ ಸರ್ಕ್ಯೂಟ್ ಹಿಟ್​ ಆಯಿತು. ಅಂದರೆ, ದಿನದ ಗರಿಷ್ಠ ಕುಸಿತ ಮಿತಿಯನ್ನು ತಲುಪಿತು.

    ವರದಿಗಳ ಪ್ರಕಾರ, ಝೀ ಸಂಸ್ಥಾಪಕರ ಬಗ್ಗೆ ಸೆಬಿಯ ತನಿಖೆಯ ಸಂದರ್ಭದಲ್ಲಿ, ಕಂಪನಿಯಿಂದ ಸರಿಸುಮಾರು 2,000 ಕೋಟಿ ರೂ. (241 ಮಿಲಿಯನ್‌ ಡಾಲರ್​) ಹಣವನ್ನು ಬೇರೆ ವರ್ಗಾಯಿಸಲಾಗಿದೆ ಎಂದು ಸೆಬಿ ಪತ್ತೆ ಮಾಡಿದೆ. ಆದರೆ, ಲೆಕ್ಕಪತ್ರಕ್ಕೆ ಸಂಬಂಧಿಸಿದ ಇಂತಹ ವರದಿಗಳು “ತಪ್ಪು ಮತ್ತು ಸುಳ್ಳು” ಎಂದು ಕಂಪನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

    ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನ್ನ ನಿಲುವನ್ನು ವಿವರಿಸಲು ಅದರ ಸಂಸ್ಥಾಪಕರಾದ ಸುಭಾಷ್ ಚಂದ್ರ ಮತ್ತು ಅವರ ಪುತ್ರ ಪುನಿತ್ ಗೋಯೆಂಕಾ ಸೇರಿದಂತೆ ಝೀ ಯಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಕೆಲವು ಮಂಡಳಿಯ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿ ಹೇಳಿದೆ.

    ಇದಲ್ಲದೆ, ಕಾಣೆಯಾಗಿರುವ ಮೊತ್ತ ಎಷ್ಟೆಂಬುದು ಇನ್ನೂ ನಿಖರವಾಗಿ ಅಂತಿಮವಾಗಿಲ್ಲ ಮತ್ತು ಕಂಪನಿಯ ಕಾರ್ಯನಿರ್ವಾಹಕರ ಪ್ರತಿಕ್ರಿಯೆಗಳನ್ನು ಸೆಬಿ ಪರಿಶೀಲಿಸಿದ ನಂತರ ಬದಲಾಗಬಹುದು ಎಂದು ವರದಿಯು ಹೇಳಿದೆ.

    “ಕಂಪನಿಯಲ್ಲಿನ ಲೆಕ್ಕಪತ್ರ ಸಮಸ್ಯೆಗಳಿಗೆ ಸಂಬಂಧಿಸಿದ ವರದಿಗಳು ಮತ್ತು ವದಂತಿಗಳು ತಪ್ಪು ಮತ್ತು ಸುಳ್ಳು. ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (SAT) ಆದೇಶದ ಅನುಸಾರವಾಗಿ, ಕಂಪನಿಯು ಪ್ರಸ್ತುತ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗೆ (KMP) ಪರಿಹಾರವನ್ನು ನೀಡಿದೆ. SEBI ವಿನಂತಿಸಿದ ಎಲ್ಲಾ ಅಭಿಪ್ರಾಯಗಳನ್ನು, ಮಾಹಿತಿ ಅಥವಾ ವಿವರಣೆಯನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಕಂಪನಿ ಇದೆ. ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ” ಎಂದು ಕಂಪನಿ ವಕ್ತಾರ ತಿಳಿಸಿದ್ದಾರೆ.

    ಮಂಗಳವಾರ, ZEE ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್‌ಗಳು (ಇಂಡಿಯಾ) ತಮ್ಮ 10 ಬಿಲಿಯನ್ ಡಾಲರ್​ ವಿಲೀನ ಪ್ರಕ್ರಿಯೆ ಮುಂದುವರಿಸಲು ಕೆಲಸ ಮಾಡುತ್ತಿವೆ ಎಂಬ ವರದಿಗಳ ಮಧ್ಯೆ ZEEL ನ ಷೇರುಗಳು 8 ಪ್ರತಿಶತದಷ್ಟು ಹೆಚ್ಚಳ ಕಂಡಿದ್ದವು.

    6 ದಿನಗಳ ಏರುಪ್ರವೃತ್ತಿಗೆ ಭಂಗ ತಂದ ಕರಡಿ ಕುಣಿತ: 434 ಅಂಕ ಕುಸಿತ ಕಂಡ ಸೂಚ್ಯಂಕ

    ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದ ಟಾಟಾ ಇನ್ವೆಸ್ಟ್‌ಮೆಂಟ್ ಷೇರು: ವರ್ಷದಲ್ಲಿ 206%; ತಿಂಗಳಲ್ಲಿ 43 % ಲಾಭ ನೀಡಿದ ಸ್ಟಾಕ್​ಗೆ ಅಪಾರ ಬೇಡಿಕೆ

    ಟಾಟಾ ಪವರ್​ ಷೇರು 3 ತಿಂಗಳಲ್ಲಿ ಶೇ. 45% ಏರಿಕೆ: ಈಗ ಬ್ಲೂಸ್ಮಾರ್ಟ್​ ಜತೆ ವಿದ್ಯುತ್​ ಪೂರೈಕೆ ಒಪ್ಪಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts