More

    70% ಡಿವಿಡೆಂಡ್, 2:1 ಬೋನಸ್ ಷೇರು: ಮಲ್ಟಿಬ್ಯಾಗರ್ ಆದಾಯ ನೀಡಿದ ರಕ್ಷಣಾ ಕಂಪನಿ ಷೇರು ಖರೀದಿಗೆ ಬ್ರೋಕರೇಜ್​ ಸಂಸ್ಥೆಯ ಸಲಹೆ

    ಮುಂಬೈ: ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಸರ್ಕಾರಿ ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ (ಬಿಇಎಲ್​) ಷೇರುಗಳ ಖರೀದಿಗೆ ಬ್ರೋಕರೇಜ್​ ಸಂಸ್ಥೆಯಾದ ಐಸಿಐಸಿಐ ಸೆಕ್ಯುರಿಟೀಸ್ ಶಿಫಾರಸು ಮಾಡಿದೆ. ಪ್ರತಿ ಷೇರಿಗೆ ರೂ 215 ಗುರಿಯ ಬೆಲೆಯನ್ನು ನಿಗದಿಪಡಿಸಿದೆ.

    ಬಿಇಎಲ್​ ಷೇರುಗಳ ಬೆಲೆ ಬುಧವಾರ 188.70 ರೂಪಾಯಿ ತಲುಪಿದೆ. ಈಗ ನೀವು ಈ ಷೇರುಗಳನ್ನು 188.70 ರೂಪಾಯಿಗಳ ಕೊನೆಯ ವಹಿವಾಟಿನ ಬೆಲೆಯಲ್ಲಿ ಖರೀದಿಸಿದರೆ, ನಂತರ ಟಾರ್ಗೆಟ್​ ಗುರಿ ಬೆಲೆಗೆ ಮಾರಿದರೆ ನಿಮಗೆ 14% ನಷ್ಟು ಲಾಭ ದೊರೆಯಬಹುದು.

    ಕಳೆದ 2 ವರ್ಷಗಳಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಸ್ಟಾಕ್ ಬೆಲೆ 185% ರಷ್ಟು ಏರಿಕೆಯಾಗಿದೆ. ಬರುವ 23ರಂದು ರಂದು ಅರ್ಹ ಷೇರುದಾರರಿಗೆ ಪ್ರತಿ ಈಕ್ವಿಟಿ ಷೇರಿಗೆ 0.70/- ಮಧ್ಯಂತರ ಲಾಭಾಂಶವನ್ನು (70% ಡಿವಿಡೆಂಡ್) ಪಾವತಿಸಲಾಗುವುದು ಎಂದು ಕಂಪನಿ ಫೆಬ್ರವರಿ 12 ರಂದು ತಿಳಿಸಿದೆ. ಈ ಹಿಂದೆ ಕಂಪನಿಯು 2022 ರಲ್ಲಿ 2:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ಘೋಷಿಸಿತ್ತು. ಅಂದರೆ ಷೇರುದಾರರು ಪ್ರತಿ 1 ಷೇರಿಗೆ 2 ಬೋನಸ್ ಷೇರುಗಳನ್ನು ಪಡೆದಿದ್ದರು.

    ಈ ಕಂಪನಿಯ ಷೇರಿನ 52-ವಾರದ ಗರಿಷ್ಠ ಬೆಲೆ ರೂ. 196.25 ಮತ್ತು ಕನಿಷ್ಠ ಬೆಲೆ ರೂ. 89.68 ಆಗಿದೆ. ಕಂಪನಿಯು 1,37,862.43 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಈ ಷೇರುಗಳು ಕಳೆದ 3-ತಿಂಗಳಲ್ಲಿ 32% ರಷ್ಟು ಏರಿಕೆ ಕಂಡಿವೆ. ಕಳೆದ 1 ವರ್ಷದಲ್ಲಿ 97% ಗಳಿಸಿವೆ. ಕಳೆದ 3 ವರ್ಷಗಳಲ್ಲಿ 318% ನಷ್ಟು ಲಾಭವನ್ನು ನೀಡಿವೆ. ಕಳೆದ 5 ವರ್ಷಗಳಲ್ಲಿ, ಈ ಷೇರುಗಳ ಬೆಲೆ 631% ರಷ್ಟು ಏರಿಕೆ ಕಂಡಿದೆ.

    ಈ ಕಂಪನಿಯು ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ 859.6 ಕೋಟಿ ನಿವ್ವಳ ಲಾಭವನ್ನು ಘೋಷಿಸಿತ್ತು. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಘೋಷಿಸಲಾದ ರೂ 613 ಕೋಟಿಗೆ ಹೋಲಿಸಿದರೆ ಇದು 40% ಹೆಚ್ಚಾಗಿದೆ.

    1954 ರಲ್ಲಿ ಈ ಕಂಪನಿಯನ್ನು ಸ್ಥಾಪಿಸಲಾಗಿದೆ, ಭಾರತೀಯ ರಕ್ಷಣಾ ಸೇವೆಗಳ ವಿಶೇಷ ಎಲೆಕ್ಟ್ರಾನಿಕ್ ಉಪಕರಣಗಳ ಅಗತ್ಯತೆಗಳ ತಯಾರಿಕೆಯಲ್ಲಿ ಈ ಕಂಪನಿ ತೊಡಗಿದೆ. ರಕ್ಷಣಾ ಸಂವಹನ, ರಾಡಾರ್‌ಗಳು, ನೌಕಾ ವ್ಯವಸ್ಥೆಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು, ಹೋಮ್‌ಲ್ಯಾಂಡ್ ಸೆಕ್ಯುರಿಟಿ, ಟೆಲಿಕಾಂ ಮತ್ತು ಪ್ರಸಾರ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ವಾರ್‌ಫೇರ್, ಟ್ಯಾಂಕ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರೋ-ಆಪ್ಟಿಕ್ಸ್, ವೃತ್ತಿಪರ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೌರ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳಂತಹ ಕ್ಷೇತ್ರಗಳಿಗೆ ವ್ಯಾಪಕ ಶ್ರೇಣಿಯ ಉಪಕರಣಗಳನ್ನು ಇದು ಉತ್ಪಾದಿಸುತ್ತದೆ.

    ಸತತ 4ನೇ ದಿನವೂ ಅಪ್ಪರ್ ಸರ್ಕ್ಯೂಟ್‌ ಹೊಡೆದ ಪೇಟಿಎಂ ಷೇರುಗಳು: ಪಾತಾಳ ಮುಟ್ಟಿದ ಸ್ಟಾಕ್​ ಬೆಲೆ ಈಗ ಹೆಚ್ಚುತ್ತಿರುವುದೇಕೆ?

    2000 ಕೋಟಿ ರೂಪಾಯಿ ಹೇರಾಪೇರಿ ಪತ್ತೆ ಮಾಡಿದ ಸೆಬಿ: ಝೀ ಎಂಟರ್‌ಟೈನ್‌ಮೆಂಟ್ ಷೇರು ಕುಸಿತ ಕಂಡು ಲೋವರ್​ ಸರ್ಕ್ಯೂಟ್​ ಹಿಟ್​

    6 ದಿನಗಳ ಏರುಪ್ರವೃತ್ತಿಗೆ ಭಂಗ ತಂದ ಕರಡಿ ಕುಣಿತ: 434 ಅಂಕ ಕುಸಿತ ಕಂಡ ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts