ಕ್ರೀಡೆ

IPL 2024: ಡೆಲ್ಲಿ ವಿರುದ್ಧ ಟಾಸ್​ ಗೆದ್ದ ಗುಜರಾತ್​ ಬೌಲಿಂಗ್​ ಆಯ್ಕೆ

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ ಟೂರ್ನಿಯಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಎರಡು ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಪ್ಲೇಆಫ್ ರೇಸ್‌ನಲ್ಲಿ ಅವಕಾಶ ವೃದ್ಧಿಸಿಕೊಳ್ಳುಲು ಉಭಯ ತಂಡಗಳಿಗೆ ಗೆಲುವು ಅನಿವಾರ ಎನಿಸಿದೆ. ಶುಭಮಾನ್ ಗಿಲ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದು, ರಿಷಭ್ ಪಂತ್ ಬಳಗ ಹಾಲಿ ಆವೃತ್ತಿಯಲ್ಲಿ ತವರು ಅಭಿಮಾನಿಗಳ ಎದುರು ಕಂಬ್ಯಾಕ್‌ನ ತವಕದಲ್ಲಿದೆ.

ಗುಜರಾತ್ ಟೈಟಾನ್ಸ್ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಪ್ರಯಾಸದ ಜಯ ಸಾಧಿಸಿದೆ. ಆದರೆಟೂರ್ನಿಯಲ್ಲಿ ಅಸ್ಥಿರನಿರ್ವಹಣೆಯ ಹಿನ್ನಡೆ ಎದುರಿಸಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಜಯ, 4 ಸೋಲಿನೊಂದಿಗೆ 8 ಅಂಕ ಕಲೆಹಾಕಿದೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 3 ಗೆಲುವು, 5 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಸನ್‌ ರೈಸರ್ಸ್ ವಿರುದ್ಧ ಎಸಗಿದ ತಪ್ಪುಗಳನ್ನು ಸರಿಪಡಿಸಿಕೊಂಡು ತಂಡವನ್ನು ಯಶಸ್ಸಿನ ಹಾದಿಗೆ ತರುವ ಸವಾಲು ನಾಯಕ ರಿಷಭ್ ಪಂತ್ ಮುಂದಿದೆ.