ನವದೆಹಲಿ: ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಭಾರತ 100 ವರ್ಷ ಪೂರೈಸಿದ ನೆನಪಿಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ ನೂತನ ಲಾಂಛನ ಬಿಡುಗಡೆ ಮಾಡಿದೆ. ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಿದ್ಧಪಡಿಸಲಾಗಿರುವ ಲೋಗೋಗೆ ಟೀಮ್ ಇಂಡಿಯಾ ಎಂದು ಹೆಸರಿಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತೀಯ ಕ್ರೀಡಾಪಟುಗಳ ಕೊಡುಗೆಯನ್ನು ಇದೇ ಸ್ಮರಿಸಲಾಗಿದೆ.
ಇದನ್ನೂ ಓದಿ:ಹಾವು ಕಚ್ಚಿದ್ದಕ್ಕೆ ಮದ್ದು ಇದೆ, ತಪ್ಪು ಗ್ರಹಿಕೆಗೆ ಇಲ್ಲ ಎಂದು ಅಫ್ರಿದಿಗೆ ಚಾಟಿ ಬೀಸಿದ ಆಕಾಶ್ ಚೋಪ್ರಾ!
ಹಿಂದಿನ ಲೋಗೋ ‘ಸ್ಟಾರ್ ಆ್ ಇಂಡಿಯಾ’ ಬ್ರಿಟಿಷ್ ರಾಜ್ ಕಾಲದಲ್ಲಿ ಅಳವಡಿಸಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಐಒಎ ಸಿಂಬಲ್ ಅದೇ ಆಗಿತ್ತು. ಇದೀಗ ನೂತನ ಲೋಗೋಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮತಿ ನೀಡಿದ್ದು, ಆಗಸ್ಟ್ 15 ರಂದು ವಿಶೇಷ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.