ಕ್ರೀಡೆ

Bumrah ಬದಲು Border-Gavaskar Trophyಗೆ ಈತನನ್ನು ಆಯ್ಕೆ ಮಾಡಿ; BCCIಗೆ ಸಲಹೆ ನೀಡಿದ ಪಾಕ್​ ಮಾಜಿ ಪ್ಲೇಯರ್​

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುಚಂತೆ ಯಾವುದಾದರು ಅಂತಾರಾಷ್ಟ್ರೀಯ ಟೂರ್ನಿ ಅಥವಾ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವರುಗಳು ನೀಡುವ ವ್ಯಕ್ತಿರಿಕ್ತ ಹೇಳಕೆಗಳು ಉಭಯ ದೇಶಗಳ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿಸುತ್ತದೆ. ಇದೀಗ ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಕುರಿತಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು (Pakistan Ex Cricketer) ನೀಡಿರುವ ಹೇಳಿಕೆ ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಈ ಹಿಂದೆ ಐಪಿಎಲ್​ನಲ್ಲಿ 156.7 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಸಖತ್​ ಸೌಂಡ್​ ಮಾಡಿದ್ದ ದೆಹಲಿ ಮೂಲದ ವೇಗಿ ಮಯಾಂಕ್​ ಯಾದವ್​ಗೆ (Mayank Yadav) ರಾಷ್ಟ್ರೀಯ ತಂಡದಿಂದ ಕರೆ ಬಂದಿದ್ದು, ಅದರಂತೆ ಅವರು ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ (T20 Series) ಟೀಮ್​ ಇಂಡಿಯಾ (Team India) ಆಪರ ಪದಾರ್ಪಣೆ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಯಾಂಕ್​ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ (Border-Gavaskar Trophy) ಇವರನ್ನು ಜಸ್ಪ್ರೀತ್​ ಬುಮ್ರಾ ಬದಲಾಗಿ ಆಯ್ಕೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಬಸಿತ್​ ಅಲಿ (Basit Ali) ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಈ ಕುರಿತು ಮಾತನಾಡಿರುವ ಬಸಿತ್​ ಅಲಿ (Basit Ali), ಮಯಾಂಕ್​ಗೆ ಇದು ಕನಸಿನ ಪಂದ್ಯವಾಗಿದ್ದು, ಆತ ಗಾಯದಿಂದ ಚೇತರಿಸಿಕೊಂಡ ಬಳಿಕ ಆಟವಾಡಿದ್ದು, 150 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯಲು ಸಾಧ್ಯವಾಗಿಲ್ಲ. ಒಂದು ವೇಳೆ ಹಾರ್ದಿಕ್​ (Hardik) ಬದಲಿಗೆ ಆತನಿಗೆ ಹೊಸ ಚೆಂಡನ್ನು ನೀಡಿದ್ದರೆ ಬ್ಯಾಟ್ಸ್​ಮನ್​ಗಳು ಇನ್ನಷ್ಟು ಬೇಗನೆ ಔಟಾಗಿರುತ್ತಿದ್ದರು. ನನ್ನ ಪ್ರಕಾರ ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ (Border-Gavaskar Trophy) ಜಸ್ಪ್ರೀತ್​ ಬುಮ್ರಾ (Jasprit Bumrah) ಬದಲಿಗೆ ಈತ ತಂಡದ ಜೊತೆ ಪ್ರಯಾಣ ಬೆಳೆಸಬಹುದು ಎಂದುಕೊಂಡಿದ್ದೇನೆ. ಬುಮ್ರಾ ಬದಲಾಗಿ ಬಿಸಿಸಿಐ ಆಯ್ಕೆ ಸಮಿತಿ (BCCI Selection Committee) ಯುವ ವೇಗಿಗೆ ಮಣೆ ಹಾಕುವುದು ಸೂಕ್ತ ಎಂದು ಬಸಿತ್​ ಅಲಿ (Basit Ali) ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.