ಕ್ರೀಡೆ

INDVsPAK: ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆ: ಮತ್ತೊಮ್ಮೆ ಹ್ಯಾಂಡ್​ಶೇಕ್​ ನಿರಾಕರಿಸಿದ ಸೂರ್ಯಕುಮಾರ್​

INDVsPAK: ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಭಾನುವಾರ ನಡೆಯುತ್ತಿರುವ ಏಷ್ಯಾಕಪ್​ - 2025 ಲೀಗ್​ನ ಭಾರತ-ಪಾಕ್ ನಡುವಿನ ಎರಡನೇ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಆದರೆ, ನಾಯಕ ಸೂರ್ಯಕುಮಾರ್​ ಯಾದವ್​ ಈ ಭಾರಿಯೂ ಪಾಕ್​​ ಟೀಮ್​ ಕ್ಯಾಪ್ಟನ್​ ಅಘಾಗೆ ಹ್ಯಾಂಡ್​ಶೇಕ್​​ ಮಾಡದೇ ತೆರಳಿದ್ದಾರೆ.

ಈ ಇದೀಗ ಭಾರತ-ಪಾಕ್​ ಹ್ಯಾಂಡ್​ಶೇಕ್​ ವಿವಾದ ಸರದಿ ಮುಂದುವರಿದಿದೆ. ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಇದು ಎರಡನೇ ಬಾರಿ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿವೆ. ಹಿಂದಿನ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ಈ ಹಿಂದೆ ದುಬೈನಲ್ಲಿ ನಡೆದ ಭಾರತ-ಪಾಕ್ ನಡುವಣ ಪಂದ್ಯದ ಟಾಸ್​ ಮತ್ತು ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಪಾಕ್ ಜತೆ ಹಸ್ತಲಾಘವ ಮಾಡೋದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಭಾರತ ತಂಡದ ವಿರುದ್ಧ ಪಾಕ್ ಕ್ರಿಕೆಟ್​ ಮಂಡಳಿ ಸೇರಿದಂತೆ ಪಾಕ್​ನ ಮಾಜಿ  ಆಟಗಾರರು ಕಿಡಿ ಕಾರಿದ್ದರು.