Army: ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸಾಧಿಸಿದ ಗೆಲುವು ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಬಲಿಯಾದ ಕುಟುಂಬಗಳಿಗೆ ಆರ್ಪಿಸಿದ್ದೇವೆ ಎಂದು ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಪಾಕ್ ವಿರುದ್ಧ ಗೆದ್ದ ನಂತರ ಮಾತನಾಡಿದ ಗಂಭೀರ್, ಭಾರತಕ್ಕೆ ಒಂದು ಒಳ್ಳೆಯ ಗೆಲುವು. ಈ ಟೂರ್ನಿಯಲ್ಲಿ ಇನ್ನೂ ಸಾಕಷ್ಟು ಪಂದ್ಯಗಳು ಉಳಿದಿದೆ. ನಮ್ಮ ಮೇಲೆ ನಡೆದ ಪಹಲ್ಗಾಮ್ ದಾಳಿಯ ಸಮಯದಲ್ಲಿ ಬಲಿಯಾದ ಕುಟುಂಬಗಳೊಂದಿಗೆ ಮತ್ತು ಅವರ ಅನುಭವಿಸಿದ ನೋವಿನ ಕಾರಣ ಈ ಪಂದ್ಯವು ಮಹತ್ವದ್ದಾಗಿತ್ತು. ಅಲ್ಲದೆ, ಇನ್ನೂ ಮುಖ್ಯವಾಗಿ, ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿ ನಡೆಸಿದ ಭಾರತೀಯ ಸೇನೆಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ದೇಶವನ್ನು ಹೆಮ್ಮೆ ಮತ್ತು ಸಂತೋಷಪಡಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಗೌತಿ ತಿಳಿಸಿದ್ಧಾರೆ.
ಇದನ್ನೂ ಓದಿ: ನಮ್ಮ ಜತೆಗಿನ ಭಾರತದ ಸಂಬಂಧವನ್ನು ಯಾರು ಮುರಿಯಲು ಸಾಧ್ಯವಿಲ್ಲ: ಪರೋಕ್ಷವಾಗಿ ಟ್ರಂಪ್ ಟಕ್ಕರ್ ಕೊಟ್ಟ ರಷ್ಯಾ| Russia
ಮುಂದುವರೆದು ಮಾತನಾಡಿದ ಗಂಭೀರ್, ಆಪರೇಷನ್ ಸಿಂಧೂರದ ಯಶಸ್ವಿಯಾಗಿ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಅಲ್ಲದೆ, ಪಾಕ್ ವಿರುದ್ಧ ಭಾರತ ಸಾಧಿಸಿದ ಗೆಲುವು ಕ್ರಿಕೆಟ್‌ಗಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ಗಂಭೀರ್ ಹೇಳಿದ್ದಾರೆ. ಪಾಕ್ ವಿರುದ್ಧ ಭಾರತ ತಂಡದ ಅದ್ಭುತ ಪ್ರದರ್ಶನವನ್ನು ಹೊಗಳಿದರು.
ಕಳೆದ ಏಪ್ರಿಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಆರಂಭದ ನಂತರ ಭಾರತ-ಪಾಕಿಸ್ತಾನ ನಡುವಿನ ಮೊದಲ ಮುಖಾಮುಖಿಯಾಗಿತ್ತು. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಭಾರೀ ಒತ್ತಡದ ನಡುವೆಯೇ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನವು ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿ ನಿಗದಿತ ಓವರ್ಗಳಲ್ಲಿ ಕೇವಲ 127 ರನ್ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಕುಲ್ದೀಪ್ ಯಾದವ್ 18 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಪಾಕ್ ನೀಡಿದ 128 ರನ್ಗಳ ಗುರಿ ಬೆನ್ನಟ್ಟಿದ ಭಾರತ ಇನ್ನೂ 25 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಬ್ಯಾಟಿಂಗ್ನಲ್ಲಿ ಅಭೀಷೇಕ್ ಶರ್ಮಾ ಸ್ಪೋಟಕ 31 ರನ್, ನಾಯಕ ಸೂರ್ಯ ಕುಮಾರ್ ಯಾದವ್ ಅಜೇಯ 47 ರನ್ಗಳಿಸಿ ಗೆಲುವು ತಂದುಕೊಟ್ಟರು. (ಏಜೆನ್ಸೀಸ್)