ನವದೆಹಲಿ: ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆದ ಭಾರತ ಮಹಿಳಾ ತಂಡಕ್ಕೆ ಶೀಘ್ರವೇ ಟೂನಿರ್ಯ ಬಹುಮಾನ ಮೊತ್ತ ಕೈಸೇರಲಿದೆ. ರನ್ನರ್ಅಪ್ ಆದ ಭಾರತ ತಂಡ 5 ಲಕ್ಷ ಯುಎಸ್ (3.64ಕೋಟಿ ರೂ) ಡಾಲರ್ ಬಹುಮಾನ ಪಡೆದುಕೊಂಡಿತ್ತು, 2020ರ ಮಾರ್ಚ್ 8 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೆಲಿಯಾ ಎದುರು ಸೋಲನುಭವಿಸಿತ್ತು.
ಈ ಮೊತ್ತ ಐಸಿಸಿಯಿಂದ ಬಿಸಿಸಿಐಗೆ ವರ್ಷದ ಕೊನೆಯಲ್ಲಿ ತಲುಪಿದ್ದು, ಶೀಘ್ರವೇ ಆಟಗಾತಿರ್ಯರಿಗೆ ಸಮಪಾಲು ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ವರ್ಷದ ಮಾರ್ಚ್ನಲ್ಲಿ ಟೂರ್ನಿಯಲ್ಲಿ ಮುಕ್ತಾಯಗೊಂಡರೂ ಬಿಸಿಸಿಐ ಮಾತ್ರ ಇನ್ನು ಆಟಗಾತಿರ್ಯರಿಗೆ ಬಹುಮಾನ ಮೊತ್ತ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಫೆಡರೇಷನ್ ಸಂಸ್ಥೆ (ಎಫ್ಐಸಿಎ) ಯುಕೆ ಮೂಲದ ಟೆಲಿಗ್ರಾಫ್ ಹೇಳಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ, ಈ ವಾರಾಂತ್ಯದಲ್ಲಿ ಮಹಿಳಾ ತಂಡಕ್ಕೆ ಬಹುಮಾನ ತಲುಪಿಸಲಾಗುವುದು ಎಂದು ತಿಳಿಸಿದೆ.
ಕಳೆದ ವರ್ಷ ಕೋವಿಡ್ನಿಂದ ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿ ಸಂಪೂರ್ಣ ಮುಚ್ಚಿದ್ದ ಹಿನ್ನೆಲೆಯಲ್ಲಿ ಬಹುತೇಕ ಹಣಕಾಸಿನ ವಹಿವಾಟುಗಳು ಸ್ಥಗಿತಗೊಂಡಿದ್ದವು. ಇದರಿಂದ ಮಹಿಳಾ ತಂಡಕ್ಕೂ ಬಹುಮಾನ ಮೊತ್ತ ತಲುಪಿಸಲು ವಿಳಂಬವಾಯಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.