ಕ್ರೀಡೆ

ಟೋಕಿಯೋ ಒಲಿಂಪಿಕ್ಸ್​​: ಭಾರತದ ಎರಡೂ ಹಾಕಿ ತಂಡಗಳ ಮುನ್ನಡೆ

ಟೋಕಿಯೋ : ಇಂದು ನಡೆದ ಒಲಿಂಪಿಕ್ಸ್​​ ಹಾಕಿ ಪೂಲ್​ ಎ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ಜಯ ಗಳಿಸಿ, ಸೆಮಿಫೈನಲ್ಸ್​ ಪ್ರವೇಶಿಸಿದೆ. ಮತ್ತೊಂದೆಡೆ ದೇಶದ ಮಹಿಳಾ ತಂಡ ಕೂಡ ಗೆಲುವು ಸಾಧಿಸಿ ಮುನ್ನಡೆದಿದೆ. ಪುರುಷರ ಹಾಕಿ ತಂಡವು ಜಪಾನ್​ ತಂಡದ ವಿರುದ್ಧ 5-3 ಸ್ಕೋರ್​ನೊಂದಿಗೆ ಜಯ ಸಾಧಿಸಿದರೆ, ಮಹಿಳಾ ಹಾಕಿ ತಂಡವು ಐರ್​ಲೆಂಡಿನ ತಂಡದ ವಿರುದ್ಧ 1-0 ಸ್ಕೋರ್​ನೊಂದಿಗೆ ಜಯ ಸಾಧಿಸಿತು.

ಇತ್ತ ಪಂಜಾಬ್​ನ ಕ್ರೀಡಾ ಸಚಿವ ರಾಣಾ ಗುರ್​ಮೀತ್​ ಸಿಂಗ್ ಸೋಧಿ ಅವರು, ಭಾರತದ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಲ್ಲಿ, ಭಾಗವಹಿಸುತ್ತಿರುವ ರಾಜ್ಯದ ಹಾಕಿ ಆಟಗಾರರಿಗೆಲ್ಲ ವೈಯಕ್ತಿಕವಾಗಿ 2.25 ಕೋಟಿ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇತರ ರಾಜ್ಯ ಸರ್ಕಾರಗಳೂ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಆಟಗಾರರಿಗೆ ನಗದು ಬಹುಮಾನಗಳನ್ನು ಘೋಷಿಸಿವೆ. (ಏಜೆನ್ಸೀಸ್)