ಕ್ರೀಡೆ

ಟಿ20 ಸರಣಿ ಗೆದ್ದ ಭಾರತ: ಸೂರ್ಯಕುಮಾರ್ ಯಾದವ್ ದಾಖಲೆ ಬ್ರೇಕ್​! ಅಭಿಷೇಕ್ ಶರ್ಮ ಹೊಸ ಮೈಲಿಗಲ್ಲು | IND vs AUS T20

IND vs AUS T20: ಇಂದು ಆತಿಥೇಯರ ನಾಡಿನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯವು ಮಳೆಯಿಂದ ರದ್ದಾಗಿದ್ದು, 2-1 ಅಂತರದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಈ ಮೂಲಕ ಸೂರ್ಯಕುಮಾರ್ ಯಾದವ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಮೊದಲು ಬ್ಯಾಟ್​ ಮಾಡಿದ ಟೀಮ್ ಇಂಡಿಯಾಗೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಭರ್ಜರಿ ಓಪನಿಂಗ್ ನೀಡಿದರು.

ಈ ಪಂದ್ಯದಲ್ಲಿ, ಎಡಗೈ ಬ್ಯಾಟರ್​ ಆದ ಅಭಿಷೇಕ್​, ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅವರು 1000 ರನ್‌ಗಳನ್ನು ಪೂರೈಸಿದ ಅತ್ಯಂತ ವೇಗದ ಬ್ಯಾಟ್ಸ್​ಮನ್​ ಆಗಿ ಹೊರಹೊಮ್ಮಿದ್ದಾರೆ. 528 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿರುವ ಯುವ ಆಟಗಾರನಿಗೆ ಕ್ರಿಕೆಟ್​ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದುಬರುತ್ತಿವೆ.

ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್, 573 ಎಸೆತಗಳಲ್ಲಿ 1,000 ರನ್ ಗಳಿಸಿದ್ದರು. ಈ ದಾಖಲೆಯನ್ನು ಇದೀಗ ಅಭಿಷೇಕ್ ಮುರಿದಿರುವುದು ವಿಶೇಷ.

ಕಡಿಮೆ ಎಸೆತಗಳಲ್ಲಿ 1,000 ರನ್ ಗಳಿಸಿದ ಆಟಗಾರರಿವರು

  • ಅಭಿಷೇಕ್ ಶರ್ಮಾ (ಭಾರತ): 528 ಎಸೆತ
  • ಸೂರ್ಯಕುಮಾರ್ ಯಾದವ್ (ಭಾರತ): 573 ಎಸೆತ
  • ಫಿಲ್ ಸಾಲ್ಟ್ (ಇಂಗ್ಲೆಂಡ್): 599 ಎಸೆತ
  • ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): 604 ಎಸೆತ
  • ಆ್ಯಂಡ್ರೆ ರಸೆಲ್ (ವೆಸ್ಟ್ ಇಂಡೀಸ್)/ಫಿನ್ ಅಲೆನ್ (ನ್ಯೂಜಿಲೆಂಡ್): 609 ಎಸೆತ