ಕ್ರೀಡೆ

ಸಚಿನ್​, ಕೊಹ್ಲಿ, ಧೋನಿ ಅಲ್ಲವೇ ಅಲ್ಲ…ಇವರೇ ನೋಡಿ ಭಾರತದ ಶ್ರೀಮಂತ ಕ್ರಿಕೆಟಿಗ! ರಾತ್ರೋರಾತ್ರಿ ಬದಲಾಯ್ತು ಲಕ್ |India Richest cricketer

India Richest cricketer: ಕ್ರಿಕೆಟ್​ ಮಾತ್ರವಲ್ಲ ಕ್ರಿಕೆಟಿಗರು ಕೂಡ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿರುವುದು ಗೊತ್ತೇ ಇದೆ. ಸ್ಥಳೀಯ ಆಟಗಾರರಿಂದ ಹಿಡಿದು ರಾಷ್ಟ್ರೀಯ ತಂಡದ ಸದಸ್ಯರವರೆಗ ಕೋಟಿಗಟ್ಟಲೆ ಆದಾಯ ಪಡೆಯುತ್ತಿರುವ ಕ್ರಿಕೆಟಿಗರಿದ್ದಾರೆ. ರಾಷ್ಟ್ರೀಯ ತಂಡ ಹಾಗೂ ಐಪಿಎಲ್​ನಲ್ಲಿ ಆಡುವುದರ ಜೊತೆಗೆ ಜಾಹೀರಾತುಗಳ ಮೂಲಕವೂ ಸಾಕಷ್ಟು ಆದಾಯವೂ ಬರುತ್ತದೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮುಂತಾದವರು ಈ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಆದರೆ, ಇತ್ತೀಚಿನ ವರದಿಯ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿ ( India Richest cricketer ) ಗ ಈ ಮೇಲಿನ ಯಾವ ಕ್ರಿಕೆಟಿಗರೂ ಅಲ್ಲ. ಆ ದಾಖಲೆಯನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಅವರು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅದೂ ಕೂಡ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅನೇಕ ವರ್ಷಗಳ ನಂತರ ಜಡೇಜಾಗೆ ಈ ಅಪರೂಪದ ದಾಖಲೆ ಒಲಿದಿದೆ.

ಕಳೆದ ವಾರವಷ್ಟೇ ಅಜಯ್ ಜಡೇಜಾ ಅವರನ್ನು ಜಾಮ್‌ನಗರದ ಹೊಸ ರಾಜ ಎಂದು ಘೋಷಿಸಲಾಯಿತು. ಜಾಮ್‌ನಗರವನ್ನು ಹಿಂದೆ ನವನಗರ ಎಂದು ಕರೆಯಲಾಗುತ್ತಿತ್ತು, ಇದು ಗುಜರಾತ್‌ನ ಪ್ರಮುಖ ರಾಜಪ್ರಭುತ್ವದ ರಾಜ್ಯವಾಗಿತ್ತು. ಜಡೇಜಾ ಅವರನ್ನು ಜಾಮ್‌ನಗರದ ಪ್ರಸ್ತುತ ಮಹಾರಾಜ ಶತ್ರುಸಲ್ಯಸಿಂಹಜಿ ದಿಗ್ವಿಜಯ್ ಸಿನ್ಹಾಜಿ ಅವರು 'ಜಾಮ್ ಸಾಹಿಬ್' ಎಂದು ಘೋಷಿಸಿದರು.

ಜಡೇಜಾ ಅವರನ್ನು ರಾಜ ಎಂದು ಘೋಷಿಸಿದ ನಂತರ ಅವರ ನಿವ್ವಳ ಮೌಲ್ಯವೂ ಗಗನಕ್ಕೇರಿದೆ. ಇದೀಗ ಭಾರತದ ಮಾಜಿ ಉಪನಾಯಕನ ಆದಾಯ 1450 ಕೋಟಿ ರೂಪಾಯಿ. ಈ ನಿಟ್ಟಿನಲ್ಲಿ ಜಡೇಜಾ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಅವರ ಆಸ್ತಿ 1000 ಕೋಟಿ ರೂಪಾಯಿ.

ಅಂದಹಾಗೆ ಜಡೇಜಾ ಅವರ ತಾಯಿ ಜ್ಞಾನಬಾ ಜಡೇಜಾ ಅವರು ಕೇರಳದ ಆಲಪ್ಪುಳದ ಸ್ಥಳೀಯರು. ಕಳೆದ ವರ್ಷ ನಿಧನರಾದರು. ಜಡೇಜಾ ಅವರು ಪ್ರಸ್ತುತ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಡೇಜಾ ಅವರು ಐಪಿಎಲ್‌ನಲ್ಲಿ ವಿವಿಧ ತಂಡಗಳಿಗೆ ಮೆಂಟರ್ ಆಗಿ ಮತ್ತು ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿರುವ ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್​)