ಕ್ರೀಡೆ

ಪಾಂಡ್ಯಾ, ಆರ್ಷ​ದೀಪ್ ಬೊಂಬಾಟ್ ಬೌಲಿಂಗ್; ಭಾರತಕ್ಕೆ 160ರನ್​ ಟಾರ್ಗೆಟ್​ ಫಿಕ್ಸ್

ಮೆಲ್ಬೋರ್ನ್​: ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಎದುರಿಸಿತು. ನಾಯಕ ಬಾಬರ್ ಅಝಮ್ ಮೊದಲ ಬಾಲ್​ನಲ್ಲೇ ಎಲ್​ಬಿ ಬಲೆಗೆ ಬಿದ್ದರು. ಎಡಗೈ ವೇಗಿ ಆರ್ಷ್​ದೀಪ್ ಮೊದಲ ವಿಕೆಟ್ ಕಿತ್ತು ಸಂಭ್ರಮಿಸಿದರು. ನಂತರ ಮೊಹಮ್ಮದ್ ರಿಝ್ವಾನ್ ಹೆಚ್ಚು ನಿಲ್ಲದೆ, 4 ರನ್ ಗಳಿಸಿ ಮತ್ತೆ ಆರ್ಷ್​ದೀಪ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಮೂರನೇ ವಿಕೆಟ್​​ಗೆ ಜತೆಯಾದ ಶಾನ್ ಮಸೂದ್ ಮತ್ತು ಇಫ್ತಿಕಾರ್ ಅಹ್ಮದ್ ರನ್​ಗಳ ಜತೆಯಾಟವಾಡಿದರು. ಇಫ್ತಿಕಾರ್ ಅಹ್ಮದ್ 51 ರನ್ ಸಿಡಿಸಿ ಔಟ್ ಆದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್​ಮನ್​ಗೂ ತಂಡದ ಮೊತ್ತವನ್ನು ಹೆಚ್ಚಿಸಲು ಭಾರತೀಯ ಬೌಲರ್​ಗಳು ಅವಕಾಶ ಮಾಡಿಕೊಟ್ಟಿಲ್ಲ. ಈ ವೇಳೆ ಆಕ್ರಣಕಾರಿಯಾಗಿ ಬ್ಯಾಟ್​ ಬೀಸಿದ ಶಾನ್ ಮಸೂಸ್ 52ರನ್​ ಸಿಡಿಸಿ ತಂಡದ ಮೊತ್ತ 159 ಆಗುವಲ್ಲಿ ನೆರವಾದರು.

ಅದ್ಭುತವಾಗಿ ಬೌಲಿಂಗ್ ಮಾಡಿದ ಎಡಗೈ ವೇಗಿ ಆರ್ಷ್​ದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯಾ 3 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದುಕೊಂಡರು.