ಪುಣೆ: ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಮೊದಲ ದಿನದಾಟದಲ್ಲೇ ಮೇಲುಗೈ ಸಾಧಿಸಿದ್ದು, ಪ್ರವಾಸಿ ತಂಡವನ್ನು 259 ರನ್ಗಳಿಗೆ ಕಟ್ಟಿಹಾಕಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ವಾಷಿಂಗ್ಟನ್ ಸುಂದರ್ (Washington Sundar) ಜೀವನಶ್ರೇಷ್ಠ ಬೌಲಿಂಗ್ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಪ್ರವಾಸಿ ನ್ಯೂಜಿಲೆಂಡ್ ತಂಡವು ಡೆವೊನ್ ಕಾನ್ವೆ (76 ರನ್, 141 ಎಸೆತ, 11 ಬೌಂಡರಿ), ಕನ್ನಡಿಗ ರಚಿನ್ ರವೀಂದ್ರ (65ರನ್, 105 ಎಸೆತ, 5 ಬೌಡಂರಿ, 1ಸಿಕ್ಸರ್) ಅರ್ಧಶತಕದಪ ಳವಾಗಿ 79.1 ಓವರ್ನಲ್ಲಿ 259 ರನ್ಗಳಿಗೆ ಆಲೌಟ್ ಆಯಿತು. ಮೊದಲನೇ ಸೆಷನ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡವು ವಾಷಿಂಗ್ಟನ್ ಸುಂದರ್ (23.1-4-59-7), ಆರ್. ಅಶ್ವಿನ್ (24-2-64-3) ದಾಳಿಗೆ ತತ್ತರಿಸಿ ಆಲೌಟ್ ಆಯಿತು.
ಇನ್ನೂ ಭಾರತ ತಂಡದಲ್ಲಿ ಮೂರು ಬದಲಾವನೆ ಮಾಡಲಾಗಿದ್ದು, ರಾಹುಲ್ ಬದಲಿಗೆ ಶುಭಮನ್ ಗಿಲ್, ಸಿರಾಜ್ ಬದಲಿಗೆ ಆಕಾಶ್ ದೀಪ್, ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ಗೆ ಅವಕಾಶ ನೀಡಲಾಗಿತ್ತು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡವು 7 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ.