ಸೆಂಚುರಿಯನ್: ಕನ್ನಡಿಗ ಹಾಗೂ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಸೆಂಚುರಿಯನ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪದಾರ್ಪಣೆ ಅವಕಾಶ ಪಡೆದರು. ಪಂದ್ಯಕ್ಕೆ ಮುನ್ನ ಸ್ಟಾರ್ ವೇಗಿ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ, 27 ವರ್ಷದ ಪ್ರಸಿದ್ಧ ಕೃಷ್ಣಗೆ ಟೆಸ್ಟ್ ತಂಡದ ಕ್ಯಾಪ್ ವಿತರಿಸಿದರು. ಪ್ರಸಿದ್ಧ ಈ ಮುನ್ನ 2021ರಲ್ಲಿ ಏಕದಿನ ಮತ್ತು 2023ರ ಆಗಸ್ಟ್ನಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಪ್ರಸಿದ್ಧಕೃಷ್ಣ ಭಾರತ ಪರ ಟೆಸ್ಟ್ ಆಡಿದ 309ನೇ ಮತ್ತು ಕರ್ನಾಟಕದ 27ನೇ ಆಟಗಾರ ಎನಿಸಿದರು.
ಜಡೇಜಾಗೆ ಬೆನ್ನುನೋವು
ಆಲ್ರೌಂಡರ್ ರವೀಂದ್ರ ಜಡೇಜಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರು. ಅವರ ಗೈರಿನಲ್ಲಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಸಂಪಾದಿಸಿದರು.
ಬವುಮಾಗೆ ಗಾಯ
ದಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಪಂದ್ಯದ ಮೊದಲ ದಿನದಾಟದ ವೇಳೆ ಗಾಯದಿಂದಾಗಿ ಮೈದಾನ ತೊರೆದರು. ಮಾಕೋರ್ ಜಾನ್ಸೆನ್ ಎಸೆದ 20ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹೊಡೆದ ಚೆಂಡನ್ನು ಡೈವ್ ಮಾಡಿ ತಡೆಯುವ ಯತ್ನದ ವೇಳೆ ಬವುಮಾನ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಇದರಿಂದಾಗಿ ಬವುಮಾ ಪಂದ್ಯದಲ್ಲಿ ಮರಳಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. ಬವುಮಾ ಗೈರಿನಲ್ಲಿ ಅನುಭವಿ ಬ್ಯಾಟರ್ ಡೀಲ್ ಎಲ್ಗರ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಬವುಮಾ ಬದಲಿಗೆ ವಿಯಾನ್ ಮುಲ್ಡರ್ ಫೀಲ್ಡಿಂಗ್ ನಿರ್ವಹಿಸಿದರು.