ಕ್ರೀಡೆ

ಶುಭಮನ್ ಗಿಲ್​ರನ್ನು ವಾಪಸ್​ ಕಳೂಹಿಸಿದ್ದೇಕೆ? ಕಾರಣ ಹೇಳಿದ ಬ್ಯಾಟಿಂಗ್ ಕೋಚ್!

ನವದೆಹಲಿ: ಟಿ20 ವಿಶ್ವಕಪ್‌ಗೆ ಟ್ರಾವೆಲಿಂಗ್​ ರಿಸರ್ವ್​ ಆಗಿ ತೆರಳಿದ್ದ ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ಭಾರತ ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಹೊರಬಿದ್ದಾಗಿನಿಂದಲೂ ಇಬ್ಬರನ್ನೂ ವಾಪಸ್ ಕಳುಹಿಸಿದ್ದು ಏಕೆ ಎಂಬುದು ಚರ್ಚೆಯ ವಿಷಯವಾಗಿದೆ. ಇದೇ ವೇಳೆ ಗಿಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದ್ದಂತೆ, ಗಿಲ್​ ಭಾರತ ತಂಡದಿಂದ ದೂರವಾಗುತ್ತಿದ್ದಾರೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

ಆದರೆ, ಅಂತಹ ಅನುಮಾನ ಪಡುವ ಅಗತ್ಯವಿಲ್ಲ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ. ಬೇರೆ ಕಾರಣಕ್ಕೆ ಗಿಲ್ ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆ ಇಬ್ಬರನ್ನು ಹಿಂದಕ್ಕೆ ಕಳುಹಿಸಿರುವುದು ದುಡುಕಿನ ನಿರ್ಧಾರವಲ್ಲ. ಇದೊಂದು ಪೂರ್ವಯೋಜಿತ ಯೋಜನೆ. ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಆಗಮಿಸಿದಾಗ, ಮ್ಯಾನೇಜ್‌ಮೆಂಟ್ ಇಬ್ಬರು ಮೀಸಲು ಆಟಗಾರರನ್ನು ಮಾತ್ರ ಇರಿಸಿಕೊಳ್ಳಲು ನಿರ್ಧರಿಸಿತು. ಅಮೆರಿಕದಲ್ಲಿದ್ದಾಗ ನಾಲ್ಕು ಟ್ರಾವೆಲಿಂಗ್ ರಿಸರ್ವ್ ಆಟಗಾರರನ್ನು ಹೊಂದಬೇಕು ಮತ್ತು ಕೆರಿಬಿಯನ್‌ಗೆ ಹೋಗುವಾಗ ಇಬ್ಬರು ಆಟಗಾರರನ್ನು ಬಿಡುಗಡೆ ಮಾಡಬೇಕು ಎಂದು ನಾವು ಯೋಚಿಸಿದ್ದೆವು. ಈಗ ಆ ಯೋಜನೆಯ ಪ್ರಕಾರ ಶುಭಮನ್ ಮತ್ತು ಅವೇಶ್ ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ವಿಕ್ರಮ್ ರಾಥೋಡ್ ಹೇಳಿದ್ದಾರೆ.

ಅಮೆರಿಕದ ಮೈದಾನದಲ್ಲಿ ಆಟಗಾರರಿಗೆ ಗಾಯಗಳಾಗುವ ಸಾಧ್ಯತೆಯಿರುವುದರಿಂದ ನಾಲ್ವರು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಭಾರತ ಸೂಪರ್-8 ತಲುಪಿರುವುದರಿಂದ ಯಾವುದೇ ತೊಂದರೆಯಾಗದಂತೆ ಆ ಇಬ್ಬರನ್ನು ವಾಪಸ್ ಕಳುಹಿಸಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.

ಏತನ್ಮಧ್ಯೆ, ಗ್ರೂಪ್ ಹಂತದಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ಸೂಪರ್-8 ಗೆ ಅರ್ಹತೆ ಗಳಿಸಿತು. ಈ ಸೂಪರ್-8 ಭಾಗವಾಗಿ ಭಾರತ ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಗುರುವಾರ (ಜೂನ್ 20) ಬಾರ್ಬಡೋಸ್‌ನಲ್ಲಿ ಪಂದ್ಯ ನಡೆಯಲಿದೆ. ಅದಾದ ಬಳಿಕ ಜೂನ್ 22ಕ್ಕೆ ಪಂದ್ಯವಿದೆ.. ಜೂನ್ 24ಕ್ಕೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದರೂ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ನಿರ್ಧರಿಸಲಾಗುತ್ತದೆ.