ಕ್ರೀಡೆ

ಸೆಂಚುರಿಯನ್ ಟೆಸ್ಟ್​ ಸೋಲಿಗೆ ಬೌಲರ್​ಗಳ ಮೇಲೆ ಸಿಟ್ಟಾದ ರೋಹಿತ್ ಶರ್ಮ!

ಸೆಂಚುರಿಯನ್: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಹೀನಾಯ ಸೋಲಿಗೆ ಬೌಲರ್​ಗಳನ್ನು ದೂರಿದ್ದಾರೆ. ಭಾರತ ತಂಡ ಮೂರೇ ದಿನಗಳಲ್ಲಿ ಇನಿಂಗ್ಸ್​ ಮತ್ತು 32 ರನ್​ಗಳಿಂದ ಸೋಲು ಅನುಭವಿಸಿತ್ತು.

ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾಗೆ ಇತರ ಬೌಲರ್​ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂದಿರುವ ರೋಹಿತ್​, ದ. ಆಫ್ರಿಕಾಕ್ಕೆ ಮೊದಲ ಇನಿಂಗ್ಸ್​ನಲ್ಲಿ 400 ರನ್​ ಬಿಟ್ಟುಕೊಡುವಂಥ ಪಿಚ್​ ಇದಾಗಿರಲಿಲ್ಲ ಎಂದಿದ್ದಾರೆ.

"ಬುಮ್ರಾ ಬೌಲಿಂಗ್​ ಉತ್ತಮವಾಗಿಯೇ ಇತ್ತು. ಆದರೆ ಅವರಿಗೆ ಇತರ ಮೂವರು ವೇಗಿಗಳಿಂದ (ಶಾರ್ದೂಲ್​, ಪ್ರಸಿದ್ಧ ಕೃಷ್ಣ, ಸಿರಾಜ್​) ಅಗತ್ಯ ಬೆಂಬಲ ಸಿಗಲಲ್ಲ. ಇಂಥ ಪಂದ್ಯಗಳು ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತವೆ' ಎಂದು ರೋಹಿತ್​ ಹೇಳಿದ್ದಾರೆ.