ಕ್ರೀಡೆ

ಇಂದು ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ! ಎರಡೂ ತಂಡಗಳ ಬಲಾಬಲ ಹೇಗಿದೆ? ಪಿಚ್​ ವರದಿಯೇನು? | IND vs PAK

IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ ಭಾಗವಾಗಿ ಇಂದು (ಸೆ.14) ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡು ತಂಡಗಳ ಕ್ರೀಡಾಭಿಮಾನಿಗಳಲ್ಲಿ ತೀರ ಕುತೂಹಲ ಕೆರಳಿದ್ದರೆ, ಇನ್ನೂ ಒಂದಷ್ಟು ಮಂದಿಗೆ ಪಾಕ್​ ಜತೆಗೆ ಟೀಮ್ ಇಂಡಿಯಾ ಆಡುತ್ತಿರುವುದು ಇಷ್ಟವಿಲ್ಲ. ಇದಕ್ಕೆ ಕಾರಣ, ಪಹಲ್ಗಾಮ್​ ಉಗ್ರರ ದಾಳಿ.

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದರೆ, ಸಲ್ಮಾನ್ ಅಲಿ ಅಘಾ ಕ್ಯಾಪ್ಟನ್ಸಿಯಲ್ಲಿ ಪಾಕಿಸ್ತಾನ ತಂಡ ಅಖಾಡಕ್ಕಿಳಿಯಲಿದೆ. ಎರಡೂ ತಂಡಗಳ ಭರ್ಜರಿ ಪೈಪೋಟಿ ಇರಲಿದ್ದು, ಭಾರತ ಪಾಕ್​ ತಂಡವನ್ನು ಬಗ್ಗುಬಡಿಯಲಿದೆ ಎಂದೇ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಆಶಿಸಿದ್ದಾರೆ.

ಹೆಡ್-ಟು-ಹೆಡ್ ದಾಖಲೆ

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 13 ಪಂದ್ಯಗಳು ನಡೆದಿವೆ. ಈ ಪೈಕಿ 10 ಪಂದ್ಯಗಳನ್ನು ಭಾರತ ಗೆದ್ದಿದ್ದರೆ, ಪಾಕ್​ ಕೇವಲ ಮೂರು ಪಂದ್ಯಗಳನ್ನು ಗೆದ್ದಿದೆ. ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ದುಬೈನಲ್ಲಿ ಇದುವರೆಗೆ ಮೂರು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿವೆ. ಅವುಗಳಲ್ಲಿ ಎರಡರಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದರೆ, ಭಾರತ ಒಂದರಲ್ಲಿ ಜಯ ಸಾಧಿಸಿದೆ.

ಪಿಚ್ ವರದಿ ಹೇಗಿದೆ?

ದುಬೈ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ವರದಾನ ಎನ್ನಲಾಗಿದೆ. ಎರಡೂ ತಂಡಗಳಲ್ಲಿಯೂ ಅದ್ಭುತ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಹಾಗೂ ಪ್ರಬಲವಾಗಿ ಆಡುವ ತಂಡವು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಪಿಚ್‌ನಲ್ಲಿ ಸ್ಪಿನ್ ದಾಳಿಗೆ ಸಿಲುಕದೆ, ಕ್ರೀಸ್‌ಗೆ ಅಂಟಿನಿಂತರೆ, ಹೆಚ್ಚುವರಿ ರನ್‌ಗಳನ್ನು ಕಲೆಹಾಕಬಹುದು.

ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್​, ಹರ್ಷಿತ್​ ರಾಣಾ, ರಿಂಕು ಸಿಂಗ್​, ಸಂಜು ಸ್ಯಾಮ್ಸನ್​ (ವಿಕೆಟ್ ಕೀಪರ್​).

ಪಾಕಿಸ್ತಾನ ತಂಡ

ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಶಹಫ್ಜಾಬ್, ಸಲೀಂಝಾದಾ ಫರ್ಹಾನ್, ಮೊಹಮ್ಮದ್ ಶಹಫ್ಜಾಬ್, ಮೊಹಮ್ಮದ್ ಸಲ್ಮಾನ್. ಸುಫ್ಯಾನ್ ಮುಕೀಮ್.