IND vs PAK: ಫೆ.19ರಿಂದ ಪ್ರಾರಂಭವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಭಾರೀ ಮುಖಭಂಗ ಅನುಭವಿಸಿತು. ಆತಿಥೇಯ ತಂಡವಾಗಿ ಶುಭಾರಂಭ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ಗಳ ಅಂತರದಲ್ಲಿ ಸೋಲುಂಡ ಪಾಕ್, ಮುಂದಿನ ಹೈವೋಲ್ಟೇಜ್ ಪಂದ್ಯವನ್ನು ಭಾರತ ವಿರುದ್ಧ ಆಡಲಿದೆ. ಸದ್ಯ ಇದೊಂದು ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಪ್ಪಿನಮೊಗರು ಸಂಗಮ್ ಫ್ರೆಂಡ್ಸ್ ಕ್ಲಬ್ ಇದರ 30ನೇ ವಾರ್ಷಿಕೋತ್ಸವ ಕ್ರಿಕೆಟ್ ಪಂದ್ಯಾಟ ನ್ಯೂ ಬಾಯ್ಸ ತಂಡಕ್ಕೆ ಸಂಗಮ್ ಕಪ್ 2025
ಈ ಹಿಂದೆಯೇ ಹೈಬ್ರಿಡ್ ಮಾದರಿಯಲ್ಲಿ ಆಡುವುದಾಗಿ ತನ್ನ ನಿರ್ಧಾರವನ್ನು ದೃಢವಾಗಿ ತಿಳಿಸಿದ್ದ ಭಾರತಕ್ಕೆ ತವರಿನಲ್ಲಿ ಸೋಲಿನ ರುಚಿ ಉಣಿಸಬೇಕೆಂದು ಪಾಕಿಸ್ತಾನ ಪಣತೊಟ್ಟಿದೆ. ಆದರೆ, ಸೋಲಿನ ರುಚಿ ತೋರಿಸಬೇಕಾದ ಆತಿಥೇಯರ ತಂಡವೇ ಶುಭಾರಂಭ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವುದು ಸದ್ಯ ಸಾಲು ಸಾಲು ಟೀಕೆಗಳಿಗೆ ಗುರಿಯಾಗಿದೆ. ಈಗಾಗಲೇ ದುಬೈನಲ್ಲಿ ಬಿಗಿ ಬಂದೋಬಸ್ತ್, ಭದ್ರತೆಗಳನ್ನು ಒದಗಿಸಿರುವ ಐಸಿಸಿ, ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ತೋರಿರುವ ಉತ್ಸಾಹ, ಕೌತುಕಕ್ಕೆ ಬೆರಗಾಗಿದೆ. ಎರಡು ತಂಡಗಳ ಅಭಿಮಾನಿಗಳಲ್ಲಿ ಗೆಲುವು ಯಾರಿಗೆ ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿದೆ.
ಒಂದೆಡೆ ಪಾಕಿಸ್ತಾನ ಆರಂಭಿಕ ಪಂದ್ಯದಲ್ಲೇ ಸೋಲುಂಡರೆ. ಮತ್ತೊಂದೆಡೆ, ಭಾರತ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್ಗ ಭರ್ಜರಿ ಜಯ ಸಾಧಿಸಿತು. ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಪರ ಶತಕದಾಟ ಪ್ರದರ್ಶಿಸಿದ ಶುಭಮನ್ ಗಿಲ್, ಈ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ನೆನಪಿಸಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿರುವ ಗಿಲ್ ಬಗ್ಗೆ ಭರವಸೆಗಳು ಹೆಚ್ಚಿದ್ದು, ಪಾಕ್ ವಿರುದ್ಧವೂ ಶತಕ ಬಾರಿಸುವ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಹೈವೋಲ್ಟೇಜ್ ಪಂದ್ಯಕ್ಕೆ ಇನ್ನು ಒಂದು ದಿನ ಬಾಕಿ ಉಳಿದಿರುವಂತೆಯೇ ತಮ್ಮ ಎದುರಾಳಿ ತಂಡದ ಬಗ್ಗೆ ಕ್ರಿಕೆಟಿಗ ಹ್ಯಾರೀಸ್ ರೌಫ್ ಮಾತನಾಡಿದ್ದಾರೆ.
"ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೆ ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ತಂಡದ ಪ್ರತಿಯೊಬ್ಬ ಸದಸ್ಯರು ಕೂಡ ಆರಾಮದಾಯಕವಾಗಿದ್ದಾರೆ. ಎಲ್ಲರೂ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಎಲ್ಲಾ ಪಂದ್ಯಗಳಂತೆ ಈ ಪಂದ್ಯವನ್ನು ಪರಿಗಣಿಸಿದ್ದೇವೆ ಅಷ್ಟೇ. ಇದೇ ದುಬೈ ನೆಲದಲ್ಲಿ ಭಾರತವನ್ನು ಎರಡು ಬಾರಿ ಮಣಿಸಿದ್ದೇವೆ. ಹಾಗಾಗಿ, ಇಲ್ಲಿನ ಪಿಚ್ ಕಂಡಿಷನ್ ನಮಗೆ ಚೆನ್ನಾಗಿ ತಿಳಿದಿದೆ. ನಮ್ಮ ಪಂದ್ಯ ಸಂಪೂರ್ಣ ಪಿಚ್ ಕಂಡೀಷನ್ ಮೇಲೆಯೇ ನಿಂತಿರುವುದು. ಖಂಡಿತ ನಾವು ಭಾರತವನ್ನು ಮತ್ತೊಮ್ಮೆ ಸೋಲಿಸುತ್ತೇವೆ" ಎಂದು ರೌಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).