IND vs NZ Final: ಇಂದು (ಮಾ.09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ಪಡೆ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದೆ. ಆಂತೆಯೇ ಬೌಲಿಂಗ್ ಮಾಡುತ್ತಿರುವ ಭಾರತ ಆರಂಭಿಕ ಹಂತದಲ್ಲೇ ಮಿಂಚಿದೆ.
ಇದನ್ನೂ ಓದಿ: 1 ನಿಮಿಷ 313 ಗ್ರಾಂ ಸ್ಟ್ರಾಬೆರಿ ಹಣ್ಣು! ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಲಿಯಾ ಶಟ್ಕೆವರ್ | World Record
ಟೀಮ್ ಇಂಡಿಯಾ ಬೌಲರ್ಗಳಿಗೆ ಬೀಸಾಡುವ ಭರದಲ್ಲಿ ತಮ್ಮ ಬಲಿಷ್ಠ ಬ್ಯಾಟಿಂಗ್ ಲೈನ್ ಅನ್ನೇ ಕಳೆದುಕೊಂಡ ನ್ಯೂಜಿಲೆಂಡ್, ಆರಂಭಿಕ ಹಂತದಲ್ಲೇ ತೀರ ಪರದಾಡುವಂತ ಪರಿಸ್ಥಿತಿ ತಲುಪಿದೆ. ತಂಡದ ಪರ ಟಾಪ್ ಆರ್ಡರ್ ಬ್ಯಾಟರ್ಗಳಾದ ರಚಿನ್ ರವೀಂದ್ರ, ವಿಲ್ ಯಂಗ್ ಮತ್ತು ಕೇನ್ ವಿಲಿಯಮ್ಸನ್ ಆರಂಭದಲ್ಲೇ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ, ಪೆವಿಲಿಯನ್ನತ್ತ ಮುಖ ಮಾಡಿದರು.
ಎರಡು ವಿಕೆಟ್ಗಳನ್ನು ಕಬಳಿಸಿದ ಕುಲ್ದೀಪ್ ಯಾದವ್ ತಂಡದ ಪರ ಮಿಂಚಿದರೆ, ವರುಣ್ ಚಕ್ರವರ್ತಿ 1 ವಿಕೆಟ್ ಕಿತ್ತು ಮೈದಾನದಲ್ಲಿ ಸಂಭ್ರಮಿಸಿದರು. ಆರಂಭಿಕ ಹಂತದಲ್ಲೇ ಮೂರು ಬಹುಮುಖ್ಯ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬ್ಯಾಟಿಂಗ್ ತಂತ್ರವನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.