IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡಿವೆ. ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿದರೆ, ಎರಡನೇ ಟೆಸ್ಟ್ನಲ್ಲಿ ಭಾರತ ಜಯ ಸಾಧಿಸಿದೆ. ಇನ್ನು ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ತಯಾರಿ ನಡೆಸುತ್ತಿರುವ ಬೆನ್ ಸ್ಟೋಕ್ಸ್ ಪಡೆಗೆ ಇಂಗ್ಲೆಂಡ್ ದಿಗ್ಗಜ ಜೇಮ್ಸ್ ಆ್ಯಂಡರ್ಸನ್ ಮಹತ್ವದ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನನ್ನ ಬಗ್ಗೆ… ಎಡ್ಜ್ಬಾಸ್ಟನ್ ಟೆಸ್ಟ್ಗೂ ಮುನ್ನ ಆಕಾಶ್ಗೆ ಸಹೋದರಿ ಕಳುಹಿಸಿದ ಸಂದೇಶ ಮನಕಲಕುವಂತಿದೆ! Akash Deep
ಈ ಸರಣಿಯಲ್ಲಿ, ಬಲಿಷ್ಠವಾಗಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾವನ್ನು ಮಣಿಸಲು ನೆಟ್ಸ್ನಲ್ಲಿ ಭರ್ಜರಿ ಕಸರತ್ತು ನಡೆಸುತ್ತಿರುವ ಇಂಗ್ಲೆಂಡ್ ಆಟಗಾರರಿಗೆ ಇಂಗ್ಲೆಂಡ್ನ ಮಾಜಿ ವೇಗಿ ಜೇಮ್ಸ್ ಆ್ಯಂಡರ್ಸನ್ ಪ್ರಮುಖ ಸಲಹೆಗಳನ್ನೇ ಹಂಚಿಕೊಂಡಿದ್ದಾರೆ. ವೇಗಿ ಜೋಫ್ರಾ ಆರ್ಚರ್ರನ್ನು ಮೂರನೇ ಟೆಸ್ಟ್ ಪಂದ್ಯದ ಅಂತಿಮ ತಂಡದಲ್ಲಿ ಸೇರಿಸಬೇಕೆಂದು ಜೇಮ್ಸ್ ಸೂಚಿಸಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಅವರನ್ನು ಕಣಕ್ಕಿಳಿಸದೆ ಹೋದರೆ ಮ್ಯಾನೇಜ್ಮೆಂಟ್ ತಪ್ಪು ಮಾಡಲಿದೆ ಎಂದಿದ್ದಾರೆ.
2021ರ ಫೆಬ್ರವರಿಯಲ್ಲಿ ಗಾಯಗೊಂಡಿದ್ದ ಹಿನ್ನಲೆ ಜೋಫ್ರಾ ಆರ್ಚರ್ ಟೆಸ್ಟ್ನಿಂದ ದೂರ ಉಳಿದಿದ್ದರು. ಅಂದಿನಿಂದ ಯಾವ ಟೆಸ್ಟ್ ಪಂದ್ಯಗಳಲ್ಲಿಯೂ ಆರ್ಚರ್ ಕಾಣಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಒಂದು ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಅವರು ಇಂಗ್ಲೆಂಡ್ ತಂಡದ ಭಾಗವಾಗಿದ್ದರೂ, ಆದ್ರೆ, ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿಲ್ಲ.
ಇದನ್ನೂ ಓದಿ: ನಾಳೆ ಭಾರತ್ ಬಂದ್; 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿ; ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ| Bharat Bandh
ಇನ್ನು ಮೂರನೇ ಟೆಸ್ಟ್‌ಗೆ ಆರ್ಚರ್ ಆಯ್ಕೆಯಾದ ಕುರಿತು ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದರು. ಜೋಫ್ರಾ ಆರ್ಚರ್ ಪ್ರಸ್ತುತ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಅದಕ್ಕಾಗಿಯೇ ಅವರನ್ನು ಮೂರನೇ ಟೆಸ್ಟ್‌ನ ಅಂತಿಮ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸಲಾಗುವುದು ಎಂದರು. ಲಾರ್ಡ್ಸ್ ಪಿಚ್ ವೇಗಿಗಳಿಗೆ ಸೂಕ್ತ ಎಂದು ವರದಿಗಳು ಹೇಳಿರುವ ಹಿನ್ನಲೆ ಈ ಮೈದಾನದಲ್ಲಿ ಬ್ರೈಡನ್ ಕಾರ್ಸೆ ಮತ್ತು ಜೋಶ್ ಟಾಂಗ್ ಅವರ ಬದಲಿಗೆ ಜೋಫ್ರಾ ಆರ್ಚರ್ ಮತ್ತು ಗಸ್ ಅಟ್ಕಿನ್ಸನ್ರನ್ನು ಕರೆತರಲು ಇಂಗ್ಲೆಂಡ್ ಚಿಂತನೆ ನಡೆಸುತ್ತಿದೆ.
ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಾಂಗ್, ಕ್ರಿಸ್ ವೋಕ್ಸ್.