IND vs BAN: ಇಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಭಾರತ 6 ವಿಕೆಟ್ಗಳ ಅಂತರದಲ್ಲಿ ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, ಭಾರತಕ್ಕೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ ಬ್ಯಾಟ್ ಮಾಡಿದ ಬಾಂಗ್ಲಾ ಪಡೆಗೆ ಆರಂಭಿಕ ಹಂತದಲ್ಲೇ ಸ್ಟಾರ್ ಬ್ಯಾಟರ್ಗಳ ವಿಕೆಟ್ ಹೋಗಿದ್ದು, ಸೋಲಿನ ಸೂಚನೆಯನ್ನು ನೀಡಿತು. ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಬಾಂಗ್ಲಾದೇಶ 228 ರನ್ಗೆ ಆಲ್ಔಟ್ ಆಗಿ, 229 ರನ್ಗಳ ಗುರಿಯನ್ನು ಭಾರತಕ್ಕೆ ನೀಡಿತು.
ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಶುಭಮನ್ ಗಿಲ್ ಅಜೇಯ ಆರ್ಕಷಕ ಶತಕದಾಟ (101 ರನ್, 129 ಎಸೆತ) ಗೆಲುವಿನ ದಡ ಸೇರಲು ಕಾರಣವಾಯಿತು. ಗಿಲ್ಗೆ ಜತೆಯಾದ ಕನ್ನಡಿಗ ಕೆ.ಎಲ್. ರಾಹುಲ್ ಅಜೇಯ (41 ರನ್, 47 ಎಸೆತ) ತಂಡದ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು 41 ರನ್ ಬಾರಿಸಿದ ಕ್ಯಾಪ್ಟನ್ ರೋಹಿತ್ ಶರ್ಮ, ಈ ಪಂದ್ಯದ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 11,000 ರನ್ ಕಲೆಹಾಕಿದ ಎರಡನೇ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಸಾಕ್ಷಿಯಾದರು.