ಕ್ರೀಡೆ

Asia Cup 2025: ಬಾಂಗ್ಲಾದೇಶ ವಿರುದ್ಧ ಭಾರತ 41 ರನ್​ಗಳ​ ಜಯ: ಫೈನಲ್​ಗೆ ಲಗ್ಗೆ ಇಟ್ಟ ಟೀಮ್​ ಇಂಡಿಯಾ

Asia Cup 2025: ಬುಧವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ 2025ರ ಸೂಪರ್ -4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ 41 ರನ್​​ಗಳ ಜಯ ಸಾಧಿಸಿತು. ಈ ಮೂಲಕ ಫೈನಲ್​​ಗೆ ಲಗ್ಗೆ ಇಟ್ಟಿದೆ.

ಟಾಸ್​ ಸೋತು ಬ್ಯಾಟ್​ಗೆ ಇಳಿದ ಭಾರತ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್​ ನಷ್ಟಕ್ಕೆ 168 ರನ್​ ಗುರಿ ನೀಡಿತು. 168 ರನ್​ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 19.3 ಓವರ್​ನಲ್ಲಿ ತನ್ನ ಎಲ್ಲ ವಿಕೆಟ್​ ಕಳೆದುಕೊಳ್ಳುವ ಮೂಲಕ 127 ರನ್ ಗಳಿಸಿತು.

ಭಾರತದ ಪರ ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 75 ರನ್ ಗಳಿಸಿದರೆ, ಶುಭ್ಮನ್ ಗಿಲ್ 19 ಎಸೆತಗಳಲ್ಲಿ 29 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 38 ರನ್ ಗಳಿಸಿದರು.