ಕ್ರೀಡೆ

"ಮುಂದಿನ 2 ಪಂದ್ಯಗಳಲ್ಲಿ..." ಕೊಹ್ಲಿ, ರೋಹಿತ್​ ಕಳಪೆ ಪ್ರದರ್ಶನ ಬೆನ್ನಲ್ಲೇ ಸುನಿಲ್ ಗವಾಸ್ಕರ್​ ಹೇಳಿಕೆ ವೈರಲ್​​ | IND vs AUS

IND vs AUS: ಪರ್ತ್​ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿತು. ಈ ಮ್ಯಾಚ್​ನಲ್ಲಿ ಡಕ್ವರ್ತ್ ಲೂಯಿಸ್ ವಿಧಾನ (DLS) ಬಗ್ಗೆ ಟೀಮ್ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದು, ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮ ಪ್ರದರ್ಶನದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಡಕ್ವರ್ತ್ ಲೂಯಿಸ್ ವಿಧಾನ

ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆ ಉಂಟಾಯಿತು. ಇದರ ಪರಿಣಾಮವಾಗಿ, ಓವರ್‌ಗಳ ಸಂಖ್ಯೆಯನ್ನು 26ಕ್ಕೆ ಇಳಿಸಲಾಯಿತು. ಅಂತೆಯೇ, ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136 ರನ್ ಕಲೆಹಾಕಲು ಶಕ್ತವಾಯಿತು. ಇದಾದ ಬಳಿಕ ಡಕ್ವರ್ತ್ ಲೂಯಿಸ್ ವಿಧಾನವನ್ನು ಬಳಸಿಕೊಂಡು ಆಸೀಸ್‌ಗೆ 131 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಇದು ಹಲವರ ಅಚ್ಚರಿಗೆ ಕಾರಣವಾಯಿತು.

ಗವಾಸ್ಕರ್​ ಕಿಡಿ

ಟೀಮ್ ಇಂಡಿಯಾ ಗಳಿಸಿದ ರನ್‌ಗಳಿಗಿಂತ 5 ರನ್ ಕಡಿಮೆ ಗುರಿಯನ್ನು ಆಸೀಸ್​ಗೆ ನೀಡಲಾಯಿತು. ಆಸೀಸ್ 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಈ ಟಾರ್ಗೆಟ್​ ಅನ್ನು ಸುಲಭವಾಗಿ ತಲುಪಿತು. ಈ ವಿಧಾನ ಏನೆಂದು ಅನೇಕ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಗವಾಸ್ಕರ್​ ಕಿಡಿಕಾರಿದ್ದಾರೆ. ಈ ವಿಧಾನವನ್ನು ಹಿಂದಿನಿಂದಲೂ ಬಳಸಲಾಗುತ್ತಿದೆ. ಆದರೆ, ಟಾರ್ಗೆಟ್​ ಅನ್ನು ಹೇಗೆ ನಿಗದಿಪಡಿಸಬೇಕೆಂದು ಅವರಿಗೆ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.

"ಆಸ್ಟ್ರೇಲಿಯಾದ ಬೌನ್ಸಿ ಪಿಚ್​ನಲ್ಲಿ ಟೀಮ್ ಇಂಡಿಯಾ ಆಡುತ್ತಿದೆ. ಹೀಗಾಗಿ, ಅಲ್ಲಿ ಪಂದ್ಯ ಆಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಕೆಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದ ಆಟಗಾರರಿಗಂತು ಇದು ತುಂಬಾನೇ ಕಷ್ಟಕರವಾಗಿದೆ. ಪ್ರತಿದಿನ ಮೈದಾನದಲ್ಲಿ ಪ್ರ್ಯಾಕ್ಟಿಸ್​ ಮಾಡುವ ಶುಭಮನ್ ಗಿಲ್​ ಮತ್ತು ಶ್ರೇಯಸ್​ ಅಯ್ಯರ್​​ ಅಂತವರಿಗೆ ಅಲ್ಲಿ ಆಡುವುದು ಕಷ್ಟಸಾಧ್ಯವಾಗಿದೆ" ಎಂದರು.

ಭಾರತದ ಗರಿಷ್ಠ ಸ್ಕೋರ್​ 300ಕ್ಕೂ ಅಧಿಕ

"ಟೀಮ್ ಇಂಡಿಯಾ ನಿಜಕ್ಕೂ ಒಂದೊಳ್ಳೆ ತಂಡ. ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಮತ್ತು ಕೊಹ್ಲಿ ಏನಾದರೂ ದೊಡ್ಡ ಸ್ಕೋರ್​ಗಳನ್ನು ದಾಖಲಿಸಿದರೆ ಖಂಡಿತ ಅಚ್ಚರಿ ಪಡಬೇಡಿ. ಅವರೆಷ್ಟು ಮ್ಯಾಚ್​ಗಳನ್ನು ಆಡ್ತಾರೋ, ಎಷ್ಟು ಸಮಯ ನೆಟ್ಸ್​ನಲ್ಲಿ ಕಳೆಯುತ್ತಾರೋ, ಅಷ್ಟೇ ಬೇಗ ಲಯಕ್ಕೆ ಮರಳಲಿದ್ದಾರೆ. ಅವರಿಬ್ಬರು ಅಬ್ಬರಿಸಲು ಪ್ರಾರಂಭಿಸಿದರೆ, ಭಾರತದ ಗರಿಷ್ಠ ಸ್ಕೋರ್​ 300ಕ್ಕೂ ಅಧಿಕ ದಾಟುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).