ಕ್ರೀಡೆ

ಅಡಿಲೇಡ್​ ಟೆಸ್ಟ್​ನಲ್ಲಿ ಭಾರತಕ್ಕೆ ಹೀನಾಯ ಸೋಲು; 1-1 ರಿಂದ ಸಮಬಲ ಸಾಧಿಸಿದ ಆಸ್ಟ್ರೇಲಿಯಾ | IND vs AUS 2nd Test

IND vs AUS 2nd Test : ಬಾರ್ಡರ್ ಗವಾಸ್ಕರ್ ಟ್ರೋಫಿ ಅಂಗವಾಗಿ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಐದು ದಿನಗಳ ಪಿಂಕ್ ಬಾಲ್​ ಅಹರ್ನಿಶಿ ಟೆಸ್ಟ್​ ಪಂದ್ಯದವನ್ನು ಆಸ್ಟ್ರೇಲಿಯಾ ಕೇವಲ ಮೂರು ದಿನಗಳಲ್ಲೇ ಕೊನೆಗೊಳಿಸುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋತಿದೆ.

ಎರಡನೇ ದಿನ (ಶನಿವಾರ) ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 128 ರನ್ ಗಳಿಸಿತು. ರಿಷಭ್​ ಪಂತ್ ಮತ್ತು ನಿತೀಶ್ ಕುಮಾರ್ ಕ್ರೀಸ್​ ಕಾಯ್ದುಕೊಂಡಿದ್ದರು. ಮೂರನೇ ದಿನ (ಭಾನುವಾರ) ಆರಂಭವಾದ ಕೆಲವೇ ಕ್ಷಣಗಳಲ್ಲಿ ರಿಷಭ್​ ಪಂತ್ (28) ಔಟಾದರು. ನಿತೀಶ್ ಕುಮಾರ್ (42) ಹೋರಾಟದಿಂದ ಭಾರತ ಇನಿಂಗ್ಸ್ ಸೋಲನ್ನು ತಪ್ಪಿಸಿತು.

ಒಟ್ಟಾರೆಯಾಗಿ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 175 ರನ್ ಗಳಿಸಿತು. ಈ ಮೂಲಕ ಆಸಿಸ್​ ಪಡೆಗೆ ಕೇವಲ 19 ರನ್​ಗಳ ಅಲ್ಪ ಮೊತ್ತದ ಗುರಿ ನೀಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.