ಕ್ರೀಡೆ

IND vs BAN: ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದ ಆಕಾಶ್ ದೀಪ್: ಮಿಸ್​ ಆಯ್ತು ಹ್ಯಾಟ್ರಿಕ್ ವಿಕೆಟ್!

ಚೆನ್ನೈ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ಬಲಗೈ ವೇಗದ ಬೌಲರ್ ಅದ್ಭುತ ಬೌಲಿಂಗ್ ಮಾಡಿ ಭಾರತ ತಂಡದಲ್ಲಿ ಛಾಪು ಮೂಡಿಸಿದ್ದಾರೆ. 27 ವರ್ಷದ ವೇಗಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಬಾಂಗ್ಲಾಗೆ ಆರಂಭಿಕ ಹೊಡೆತ ನೀಡಿದರು. ಆದರೆ ಅವರು ಹ್ಯಾಟ್ರಿಕ್ ವಿಕೆಟ್​ ಪಡೆಯುವಲ್ಲಿ ಸ್ವಲ್ಪದರಲ್ಲೇ ಮಿಸ್​ ಮಾಡಿಕೊಂಡರು.

ಬಿಹಾರದ ಸರ್ಸಾರಾಮ್‌ನಲ್ಲಿ ಜನಿಸಿದ ಆಕಾಶದೀಪ್ ಒಂಬತ್ತನೇ ಓವರ್‌ನ ಮೊದಲ ಮತ್ತು ಎರಡನೇ ಎಸೆತಗಳಲ್ಲಿ ಬಾಂಗ್ಲಾದ ಇಬ್ಬರು ಎಡಗೈ ಬ್ಯಾಟ್ಸ್ ಮನ್ ಗಳನ್ನು ಬೇಟೆಯಾಡಿ ಕ್ಲೀನ್ ಬೌಲ್ಡ್ ಮಾಡಿದ್ದು ಗಮನಾರ್ಹ. ಅವರ​ ಈ ಸಾಧನೆಯಿಂದ ಭಾರತ ತಂಡಕ್ಕೆ ಆಕಾಶದೀಪ್ ರೂಪದಲ್ಲಿ ಉದಯೋನ್ಮುಖ ತಾರೆ ಸಿಕ್ಕಿದ್ದಾರೆ ಎಂದರೆ ತಪ್ಪಾಗಲಾರದು.

ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಆಡಿದ ಆಕಾಶದೀಪ್ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಅವರು ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಜಾಕಿರ್ ಹಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಚೆನ್ನೈನಲ್ಲಿ ಮುಂದುವರಿದಿದೆ. ಭಾರತದ ಮೊದಲ ಇನ್ನಿಂಗ್ಸ್ 376 ರನ್‌ಗಳಿಗೆ ಆಲೌಟ್ ಆಗಿತ್ತು.