ಬೆಂಗಳೂರು: ರಾಜಸ್ಥಾನ ತಂಡ ಪಂಜಾಬ್ ವಿರುದ್ಧ ಸೋಲು ಕಾಣುವುದರೊಂದಿಗೆ ಕೆಕೆಆರ್ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಗೊಂಡಿದೆ. ಆದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ಗೆ ಎದುರಾಳಿಯಾಗುವ ಅಂಕಪಟ್ಟಿಯ ದ್ವಿತೀಯ ಸ್ಥಾನಿ ತಂಡ ಯಾವುದು ಎಂಬ ಕುತೂಹಲ ಇನ್ನೂ ಉಳಿದಿದೆ. ರಾಜಸ್ಥಾನ ಜತೆಗೆ ಸನ್ರೈಸರ್ಸ್, ಸಿಎಸ್ಕೆ ತಂಡಗಳಿಗೂ ಈ ಸ್ಥಾನ ಪಡೆಯುವ ಅವಕಾಶವಿದೆ.
ರಾಜಸ್ಥಾನ ತಂಡ ಭಾನುವಾರ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದರೆ 2ನೇ ಸ್ಥಾನಕ್ಕೇರಲಿದೆ. ಆದರೆ ರಾಜಸ್ಥಾನ ತನ್ನ ಕೊನೇ ಪಂದ್ಯದಲ್ಲಿ ಸೋತರೆ, ಸನ್ರೈಸರ್ಸ್ ತಂಡ ತನ್ನ ಕೊನೇ ಪಂದ್ಯದಲ್ಲಿ ಗೆದ್ದು 2ನೇ ಸ್ಥಾನಕ್ಕೇರಬಹುದಾಗಿದೆ. ರಾಜಸ್ಥಾನ ಮತ್ತು ಸನ್ರೈಸರ್ಸ್ ಎರಡೂ ತಮ್ಮ ಕೊನೇ ಪಂದ್ಯದಲ್ಲಿ ಸೋತರೆ ಆಗ ಸಿಎಸ್ಕೆ ತಂಡ ಆರ್ಸಿಬಿ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಬಹುದಾಗಿದೆ.
ಪ್ಲೇಆಫ್ 4ನೇ ಸ್ಥಾನಕ್ಕೆ ಆರ್ಸಿಬಿ-ಸಿಎಸ್ಕೆ ಫೈಟ್
ಸನ್ರೈಸರ್ಸ್ 3ನೇ ತಂಡವಾಗಿ ಪ್ಲೇಆಫ್ಗೆ ಏರಿರುವುದರಿಂದ ಬಾಕಿ ಉಳಿದ ಇನ್ನೊಂದು ಸ್ಥಾನಕ್ಕೆ ಸಿಎಸ್ಕೆ-ಆರ್ಸಿಬಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಶನಿವಾರ ಆರ್ಸಿಬಿ 18 ರನ್ಗಳಿಂದ (200 ರನ್ ಗಳಿಸಿ) ಗೆದ್ದರೆ ರನ್ರೇಟ್ನಲ್ಲಿ ಸಿಎಸ್ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್ಗೇರುತ್ತದೆ. ಇಲ್ಲದಿದ್ದರೆ ಸಿಎಸ್ಕೆ ಸೋತರೂ ಪ್ಲೇಆಫ್ಗೇರಲಿದೆ.