ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕೊನೇ ಪಂದ್ಯದಲ್ಲಿ 106 ರನ್ಗಳಿಂದ ಗೆಲ್ಲುವ ಮೂಲಕ ಭಾರತ 1-1 ಸಮಬಲ ಸಾಧಿಸಿತು. ಟೀಮ್ ಇಂಡಿಯಾ ಪರ ಸರಣಿಯ ಅತ್ಯುತ್ತಮ ಫೀಲ್ಡರ್ ಆಗಿ ವೇಗಿ ಮೊಹಮದ್ ಸಿರಾಜ್ ಆಯ್ಕೆಯಾಗಿದ್ದು, ಅಂತಿಮ ಪಂದ್ಯದ ಬಳಿಕ ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಸಿರಾಜ್ಗೆ ಚಿನ್ನದ ಪದಕವನ್ನು ನೀಡಿದರು.
ಕಳೆದ ವಿಶ್ವಕಪ್ನಲ್ಲಿ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್ಗೆ ನೀಡಲಾಗುತ್ತಿದ್ದ ಚಿನ್ನದ ಪದಕವನ್ನು ಈಗ "ಇಂಪ್ಯಾಕ್ಟ್ ಫೀಲ್ಡರ್ ಆ್ ದಿ ಸಿರೀಸ್' ಆಗಿ ನೀಡಲಾಗುತ್ತಿದೆ. ಅಂತಿಮ ಪಂದ್ಯದಲ್ಲಿ ಆರಂಭಿಕ ರೀಜಾ ಹೆಂಡ್ರಿಕ್ಸ್ರನ್ನು ಡೈರೆಕ್ಟ್ ಹಿಟ್ ರನೌಟ್ ಮಾಡುವ ಮೂಲಕ ಸಿರಾಜ್ ಹರಿಣಗಳ ಕುಸಿತಕ್ಕೆ ನಾಂದಿ ಹಾಡಿದ್ದರು.
ನಂತರ ಕುಲದೀಪ್ ಯಾದವ್ (17ಕ್ಕೆ 5) ಸ್ಪಿನ್ ಕಡಿವಾಣ ಹಾಕಿದ್ದರು. ಶತಕವೀರ ನಾಯಕ ಸೂರ್ಯಕುಮಾರ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.