ಕ್ರೀಡೆ

VVS laxman ಅವರ ಆ ಒಂದು ಕ್ಯಾಚ್​ನಿಂದ ಕೊನೆಯಾಯ್ತು ಆಸೀಸ್​ ಲೆಜೆಂಡರಿ ಆಟಗಾರನ ವೃತ್ತಿಬದುಕು

ನವದೆಹಲಿ: ನಾವು ನೋಡಿದಂತ ಎರಡು ದೇಶಗಳ ನಡುವೆ ಯಾವುದಾದರೂ ಅಂತಾರಾಷ್ಟ್ರೀಯ ಸರಣಿ ಆರಂಭವಾಗುವುದಕ್ಕೆ ಮುನ್ನ ಉಭಯ ತಂಡಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ಇವರುಗಳು ನೀಡುವ ಅತಿರೇಕದ ಹೇಳಿಕೆಗಳು ಉಭಯ ದೇಶದ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿ ಮಾಡುತ್ತದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರನೋರ್ವ ತಾವು ನಿವೃತ್ತಿ ಘೋಷಿಸಲು ವಿವಿಎಸ್​ ಲಕ್ಷ್ಮಣ್​ ಕಾರಣ ಎಂದು ಹೇಳಿದ್ದು, ಈ ಬಗ್ಗೆ ಕಾರಣವನ್ನು ಸಹ ವಿವರಿಸಿದ್ದಾರೆ.

2008ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕು ಪಂದ್ಯಗಳ ಟೆಸ್ಸ್​ ಸರಣಿಯಲ್ಲಿ ಗಿಲ್​ಕ್ರಿಸ್ಟ್​ ದಿಢೀರ್​ ಎಂದು ನಿವೃತ್ತಿ ನಿರ್ಧಾರವನ್ನು ಪ್ರಕಟಿಸುವ ಮೂಲಕ ವಿಶ್ವ ಕ್ರಿಕೆಟ್​ಗೆ ಅಚ್ಚರಿ ಮೂಡಿಸಿದ್ದರು. ಗಿಲ್​ಕ್ರಿಸ್ಟ್​​ ದಿಢೀರ್​ ಎಂದು ನಿರ್ಧಾರ ಪ್ರಕಟಿಸಿದರ ಕಾರಣವನ್ನು 16 ವರ್ಷಗಳ ಬಳಿಕ ರಿವೀಲ್​ ಮಾಡಿದ್ದು, ತಮ್ಮ ನಿವೃತ್ತಿಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್​ ಕಾರಣ ಎಂಬುದು ಗಮನಾರ್ಹ ಸಂಗತಿಯಾಗಿದೆ.

ನಾನು ಭಾರತದ ವಿರುದ್ಧ ಆಡುವಾಗ ಹಾಸ್ಯಾಸ್ಪದ ಸಂಗತಿಯೊಂದು ಸಂಭವಿಸಿತು. ಬ್ರೆಟ್​ ಲೀ ಬೌಲಿಂಗ್​ ಮಾಡುವಾಗ ನಾನು ಕ್ಯಾಚ್​ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಭಾರತದ ಸರಣಿ ನಂತರ ನಾವು ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ತಯಾರಿ ಆರಂಭಿಸಬೇಕಿತ್ತು. ಹೀಗಾಗಿ ಹಿಂದಿನ ದಿನ ರಾತ್ರಿ ನಾನು ನನ್ನ ಹೆಂಡತಿಯೊಂದಿಗೆ ಫೋನಿನಲ್ಲಿ ಬ್ಯುಸಿಯಿದ್ದೆ. ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ನಾನು 99ನೇ ಟೆಸ್ಟ್​ ಪಂದ್ಯವನ್ನು ಆಡಬೇಕಾಗಿತ್ತು. ಇದಾದ ಬಳಿಕ ಭಾರತದ ವಿರುದ್ಧ 100ನೇ ಟೆಸ್ಟ್​ ಪಂದ್ಯ ಆಡುವ ಮೂಲಕ ನಾನು ಕೂಡ ಎಲೈಟ್​ ಕ್ಲಾಸ್​ ಸೇರುತ್ತಿದ್ದೆ.

ಇದಾದ ಬಳಿಕ ಮಾರನೆಯ ದಿನ ಭಾರತ ವಿರುದ್ಧದ ಪಂದ್ಯದಲ್ಲಿ ಬ್ರೆಟ್​ ಲೀ ಬೌಲಿಂಗ್​ ಮಾಡುವಾಗ ವಿವಿಎಸ್​ ಲಕ್ಷ್ಮಣ್​ ಹೊಡೆದ ಸಿಂಪಲ್​ ಶಾಟ್​ಅನ್ನು ನಾನು ಹಿಡಿಯಲು ವಿಫಲನಾದೆ. ಇದಾದ ಬಳಿಕ ನಾನು ಇದನ್ನು 32 ಬಾರಿ ನೋಡಿದ್ದೇನೆ. ಇದಾದ ಬಳಿಕ ನಾನು ನಾಯಕ ಮ್ಯಾಥ್ಯೂ ವೇಡ್​ಗೆ ನಾನು ಔಟಾಗಿದ್ದೇನೆ. ಗ್ಲೌಸ್​ಗೆ ಬಡಿದ ಚೆಂಡು ಕ್ಷಣಾರ್ಧದಲ್ಲಿ ನೆಲಕ್ಕೆ ತಾಗಿದ್ದನ್ನು ನೋಡಿದರೆ ಇದು ನನ್ನ ನಿವೃತ್ತಿಗೆ ಸೂಕ್ತ ಸಮಯ ಎಂದು ಭಾವಿಸಿದೆ. ಆ ಕ್ಷಣವೇ ನಾನು ನನ್ನ ನಿವೃತ್ತಿ ತೆಗೆದುಕೊಳ್ಳುತ್ತಿರುವ ಬಗ್ಗೆ ಪ್ರಕಟಿಸಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರ ಆ್ಯಡಮ್​ ಗಿಲ್​ಕ್ರಿಸ್ಟ್​ ಖಾಸಗಿ ಸುದ್ದಿ ವಾಹಿನಿಯ ಪಾಡ್​ಕಾಸ್ಟ್​ನಲ್ಲಿ ವಿವರಿಸಿದ್ದಾರೆ.