ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮತ್ತು ಆರ್‌ಸಿಬಿಯ ಆಧಾರ ಸ್ತಂಭ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ರನ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಸೀಸನ್‌ನಲ್ಲಿ ಕೊಹ್ಲಿ ಅವರು ಆಡಿದ 12 ಪಂದ್ಯಗಳಲ್ಲಿ 634 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಮುಂದುವರಿದಿದ್ದಾರೆ. ಆದರೂ, ಕೊಹ್ಲಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.
ಎಲ್ಲರಿಗಿಂತ ಉತ್ತಮವಾಗಿ ಆಡುತ್ತಿದ್ದರೂ ಕೊಹ್ಲಿಯಿಂದಾಗಿಯೇ ಆರ್ಸಿಬಿ ಸೋತಿತು ಎಂದು ಮಾಜಿ ಆಟಗಾರರು ಹಾಗೂ ಕೆಲ ನೆಟ್ಟಿಗರು ಟೀಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ನಿಧಾನಗತಿಯ ಬ್ಯಾಟಿಂಗ್ ಮತ್ತು ಕಡಿಮೆ ಸ್ಟ್ರೈಕ್ ರೇಟ್‌ಗಾಗಿ ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ. ಆದರೆ, ರನ್ ಮಷಿನ್ ಕೊಹ್ಲಿ ತನ್ನ ವಿರುದ್ಧದ ಎಲ್ಲ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಇದರ ನಡುವೆ ಕೊಹ್ಲಿಯನ್ನು ಟೀಕಿಸಿದ್ದಲ್ಲಿ ಆತ ಮತ್ತಷ್ಟು ಅಪಾಯಕಾರಿಯಾಗುತ್ತಾರೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅದ್ಭುತವಾಗಿದ್ದು, ಸ್ಪಿನ್ ಬೌಲಿಂಗ್ ಎದುರಿಸವಾಗ ಸುಧಾರಿಸಿಕೊಳ್ಳಬೇಕೆಂದು ಹೇಡನ್ ಸಲಹೆ ನೀಡಿದ್ದಾರೆ. ಸ್ಪಿನ್‌ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ 138 ಇದೆ ಎಂದು ನೆನಪಿಸಿದ ಹೇಡನ್, ಮುಂಬರುವ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಪವರ್ ಪ್ಲೇನಲ್ಲಿ ಕಟ್ಟಿಹಾಕಲು ಸ್ಪಿನ್ನರ್‌ಗಳನ್ನು ಬಳಸುವ ಸಾಧ್ಯತೆಗಳಿವೆ ಎಂದು ಸುಳಿವು ನೀಡಿದರು. ಆದ್ದರಿಂದಲೇ ಎದುರಾಳಿ ವಿರುದ್ಧ ಆಕ್ರಮಣಕಾರಿ ಮನೋಭಾವ ಹೆಚ್ಚಿಸಿಕೊಳ್ಳಬೇಕು ಮತ್ತು ಸ್ಪಿನ್ ಬೌಲಿಂಗ್ನಲ್ಲೂ ವಿರಾಟ್ ವೇಗವಾಗಿ ಆಡಬೇಕು ಎಂದು ಹೇಡನ್ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)