More

    ಭೂಮಿಗೆ ಬಂದಿಳಿದ ಏಲಿಯನ್ಸ್​! ಈ ವಿಡಿಯೋ ಸಾಕ್ಷಿ ನಕಲಿಯಂತೂ ಅಲ್ವೇ ಅಲ್ಲ ಅಂದ್ರು ತಜ್ಞರು

    ವಾಷಿಂಗ್ಟನ್​: ಏಲಿಯನ್​ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.

    ಆದರೂ ಏಲಿಯನ್‌ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ. ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಇದೀಗ ಅಮೆರಿಕದ ಲಾಸ್ ವೇಗಾಸ್‌ನ ಕುಟುಂಬವೊಂದು ಏಲಿಯನ್​ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವನ್ನು ಚಿತ್ರೀಕರಿಸಿದೆ. ಅಲ್ಲದೆ, ತಜ್ಞರ ಗುಂಪೊಂದು ಈ ವಿಡಿಯೋ ನಕಲಿ ಅಲ್ಲ ಅಸಲಿ ಅಂತಾನೂ ಪ್ರತಿಪಾದಿಸುತ್ತಿದೆ.

    ನಡೆದಿದ್ದೇನು?
    ಕಳೆದ ವರ್ಷ ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 11.50ರ ಸುಮಾರಿಗೆ ಈ ಘಟನೆ ನಡೆದಿದೆ. ಲಾಸ್ ವೇಗಾಸ್‌ನ ಕುಟುಂಬವೊಂದಕ್ಕೆ ಆಕಾಶದಲ್ಲಿ ಹಸಿರು ದೀಪವೊಂದು ಕಾಣಿಸುತ್ತದೆ. ಅಷ್ಟರಲ್ಲೇ ಮನೆಯ ಹಿಂಬದಿಯಲ್ಲಿ ಏನೋ ಬೀಳುತ್ತಿರುವುದನ್ನು ಗೋಚರಿಸುತ್ತದೆ. ಏನೆಂದು ಪರಿಶೀಲಿಸುತ್ತಿರುವಾಗ ಬೇಲಿಗಳ ಬಳಿ ವಿಚಿತ್ರ ಆಕೃತಿಯೊಂದು ಕಾಣುತ್ತದೆ. ಉದ್ದವಾದ, ತೆಳ್ಳಗಿನ ಆಕೃತಿಯು ಬೂದು-ಹಸಿರು ಬಣ್ಣದಲ್ಲಿದ್ದು ಸುಮಾರು 8 ರಿಂದ 10 ಅಡಿ ಎತ್ತರವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ದೈತ್ಯ ಹೊಳೆಯುವ ಕಣ್ಣುಗಳಿಂದ ಆ ಆಕೃತಿಯು ತಮ್ಮನ್ನು ದಿಟ್ಟಿಸುತ್ತಿರುವಂತೆ ಭಾಸವಾಯಿತು ಮತ್ತು ಅದು ಮನುಷ್ಯನಲ್ಲ ಎಂಬುದು ಶೇ. 100 ರಷ್ಟು ಖಚಿತವಾಗಿದೆ ಎಂದು ವೀಡಿಯೊವನ್ನು ರೆಕಾರ್ಡ್ ಮಾಡಿದ ಕುಟುಂಬದವರು ಹೇಳುತ್ತಾರೆ. ಈ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ಇದೀಗ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಲ್ಲಿ ಅಸಹಜವಾದದ್ದೇನೂ ಕಂಡುಬಂದಿಲ್ಲ ಎಂದಿದ್ದರೆ.

    ಲಾಸ್ ವೇಗಾಸ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರ ಬಾಡಿ ಕ್ಯಾಮೆರಾದಲ್ಲಿಯೂ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ಹಾರುವ ಬೆಳಕಿನ ಹಸಿರು ಗೋಳ ಸೆರೆಯಾಗಿದೆ. ಆಕಾಶದಿಂದ ಏನೋ ಬೀಳುತ್ತಿರುವುದನ್ನು ಅಧಿಕಾರಿ ಗಮನಿಸಿದ್ದಾರೆ. ಪೂರ್ವ ಕ್ಯಾಲಿಫೋರ್ನಿಯಾ, ನೆವಾಡಾ ಮತ್ತು ಉತಾಹ್‌ನಲ್ಲಿ ಆಕಾಶದಲ್ಲಿ ಹಸಿರು ಬೆಳಕನ್ನು ನೋಡಿದ ಹಲವಾರು ಜನರು ಅದನ್ನು ವರದಿ ಮಾಡಿದ್ದಾರೆ. ಆದರೆ ಇದನ್ನು ಕೆಲವರು ಸಾಮಾನ್ಯವಾಗಿ ಉಲ್ಕಾಶಿಲೆ ಎಂದು ಭಾವಿಸಿದ್ದಾರೆ. ಆದರೆ, ಇನ್ನು ಕೆಲವರು ಇದು ಏಲಿಯನ್​ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಈ ರೀತಿ ಮೊದಲೇ ಆಡಿದಿದ್ದರೆ ಟಿ20 ವಿಶ್ವಕಪ್​ಗಾದ್ರೂ ಆಯ್ಕೆ ಆಗ್ತಿದ್ದೆ! ಯುವ ಆಟಗಾರನ ಕಾಲೆಳೆದ ವೀರೂ

    ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಬೇಕಾದ್ರೆ ಇದು ಸಂಭವಿಸಲೇಬೇಕು… ಡುಪ್ಲೆಸಿಸ್ ಪಡೆಗೆ ಇರುವುದು ಅದೊಂದೆ ಅಡ್ಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts