ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಯುಎಸ್ಎ ನಡುವಿನ ಟಿ-20 ಪಂದ್ಯದಲ್ಲಿ ಟೀಮ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಎದುರಾಳಿಗಳಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಎದುರಾಳಿ ತಂಡದ ಆಟಗಾರರು ಹೇಳಿಕೆ ನೀಡುವುದು ಸಹಜ ಅದೇ ರೀತಿ ಇದೀಗ ಯುಎಸ್ಎ ತಂಡದ ಆಟಗಾರ ವಿರಾಟ್ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪಂದ್ಯಕ್ಕೂ ಮುನ್ನ ಮಾತನಾಡಿರುವ ಯುಎಸ್ಎ ಆಟಗಾರ ಅಲಿ ಖಾನ್, ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ಎಲ್ಲಾ ರೀತಿಯಿಂದ ಸಜ್ಜುಗೊಂಡಿದ್ದೇವೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಅವರ ವಿರುದ್ಧ ಆಡುತ್ತಿರುವುದು ಉತ್ತಮ ಎನ್ನಿಸುತ್ತಿದೆ. ಅವರು ಮೈದಾನದಲ್ಲಿ ಹೇಗೆ ಆಕ್ರಮಣಕಾರಿಯಾಗಿ ಆಡುತ್ತಾರೋ ಅದೇ ರೀತಿ ನಾನು ಇರುತ್ತೇನೆ.
ನೀವು ಬೆಂಕಿಯೊಂದಿಗೆ ಆಡುತ್ತಿದ್ದೀರಿ ಎಂದು ಪ್ರತಿಬಾರಿಯೂ ತಮ್ಮ ವರ್ತನೆಯಿಂದಲೇ ಹೇಳುತ್ತಾರೆ. ನೆಕ್ ಟು ನೆಕ್ ಫೈಟ್ ಇದ್ದಾಗಲೇ ಅವರ ವಿರುದ್ಧ ಆಡಲು ಖುಷಿ ಕೊಡುತ್ತದೆ. ಇದಕ್ಕಾಗಿಯೇ ಅವರನ್ನು ಕಿಂಗ್ ಕೊಹ್ಲಿ ಎಂದು ಕರೆಯಲಾಗುತ್ತದೆ ಎಂದು ಯುಎಸ್ಎ ಆಟಗಾರಿ ಅಲಿ ಖಾನ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಬುಧವಾರ (ಜೂನ್ 12) ಕ್ರಿಕೆಟ್ ಶಿಶು ಯುಎಸ್ಎ ವಿರುದ್ಧ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್ 8ಗೆ ಲಗ್ಗೆ ಇಡಲು ಸಜ್ಜಾಗಿದ್ದು, ಈ ಬಾರಿ ಕಪ್ ಗೆಲ್ಲುವ ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಒಂದಾಗಿದೆ. ಅಂತಿಮವಾಗಿ ಈ ಬಾರಿಯ ಕಪ್ ಯಾವ ತಂಡದ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.