ಕ್ರೀಡೆ

ಸಚಿನ್​ಗಿಂತಲೂ Virat Kohli ಶ್ರೇಷ್ಠ ಆಟಗಾರ; ಮಾಜಿ ಆಟಗಾರನ ಹೇಳಿಕೆ ವೈರಲ್

ಮೆಲ್ಬೋರ್ನ್​: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಕ್ರೀಡಾ ಲೋಕದಲ್ಲಿ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ (Virat Kohli) ದಾಖಲೆಗಳ ಸರದಾರ ಎಂದರೆ ತಪ್ಪಾಗಲಾರದು. ನಿರ್ಣಾಯಕ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸೇರಿದಂತೆ ಇತರೆ ಟೆಸ್ಟ್​ ಸರಣಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿರಾಟ್​ ಕೊಹ್ಲಿ ವಿಫಲರಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿರುವ ನಡುವೆಯೇ ವಿರಾಟ್​ ಕೊಹ್ಲಿ ಸಚಿನ್​ಗಿಂತ ಶ್ರೇಷ್ಠ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​ನ ಕಾಮೆಂಟರಿ ವೇಳೆ ಈ ಬಗ್ಗೆ ಮಾತನಾಡಿದ ಜಸ್ಟಿನ್​ ಲ್ಯಾಂಗರ್ (Justin Langer), ವಾಸ್ತವವಾಗಿ ಹೇಳಬಬೇಕೆಂದರೆ ನಾನು ನೋಡಿದ ಅತ್ಯುತ್ತಮ ಕ್ರಿಕೆಟಿಗ ಅಂದರೆ ಅದು ವಿರಾಟ್​ ಕೊಹ್ಲಿ (Virat Kohli). ರಿಕಿ ಪಾಂಟಿಂಗ್​ರೊಂದಿಗೆ ಸಚಿನ್​ ತಂಡೂಲ್ಕರ್​ ಹಾಗೂ ಬ್ರಿಯಾನ್​ ಲಾರಾ ವಿರುದ್ಧ ಆಡುವುದು ನನ್ನ ಜೀವನದ ವಿಶೇಷತೆಗಳಲ್ಲಿ ಒಂದಾಗಿದೆ. ನನ್ನ ಜೇಬಿನಲ್ಲಿ ಕೊನೆಯದಾಗಿ ಏನಾದರೂ ದುಡ್ಡು ಉಳಿದಿದ್ದರೆ ಬ್ರಿಯಾನ್ ಲಾರಾ ಅವರ ಬ್ಯಾಟಿಂಗ್ ವೀಕ್ಷಿಸಲು ನಾನು ಪಾವತಿಸುತ್ತೇನೆ. ಅದರ ಜತೆಗೆ ವಿರಾಟ್​ ಕೊಹ್ಲಿ ನನಗಾಗಿ ಬ್ಯಾಟಿಂಗ್​ ಮಾಡುವುದನ್ನು ನೋಡಲು ಬಯಸುತ್ತೇನೆ. 

ವಿರಾಟ್​ ಕೊಹ್ಲಿ ಬಗ್ಗೆ ನಾನು ಈ ರೀತಿ ಮಾತನಾಡಲು ಕಾರಣವೇನೆಂದರೆ ಆತ ಚೆಂಡನ್ನು ವೀಕ್ಷಿಸುವ ರೀತಿ, ವಿಕೆಟ್​ಗಳ ನಡುವೆ ಓಡುವುದು, ಫಿಟ್ನೆಸ್​, ಗ್ಲಾಡಿಯೇಟರ್ ಶೈಲಿ ನನಗೆ ತುಂವಾ ಇಷ್ಟವಾಗುತ್ತದೆ. ಈ ವಿಚಾರಕ್ಕೆ ಬರುವುದಾದರೆ ಆತನ ರೆಕಾರ್ಡ್​ಗಳೇ ಮಾತನಾಡುತ್ತವೆ. ನೀವು ಎಂದಿಗೂ ಡೇಟಾದೊಂದಿಗೆ ವಾದಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ವಿರಾಟ್​ ಸಚಿನ್​ಗಿಂತಲೂ ಅತ್ಯುತ್ತಮ ಆಟಗಾರ ಎಂದು ಜಸ್ಟಿನ್​ ಲ್ಯಾಂಗರ್ ಹೇಳಿದ್ದಾರೆ. 

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರ ಜಸ್ಟಿನ್​ ಲ್ಯಾಂಗರ್​ ಐಪಿಎಲ್​ನಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಪ್​ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.