ಮುಂಬೈ: ಇಂದು (ನವೆಂಬರ್ 15) ಏಕದಿನ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಲು ಭಾರೀ ಸೆಣಸಾಟಕ್ಕೆ ಮುಂದಾಗಿದೆ.
ಮೊದಲು ಟಾಸ್ ಗೆದ್ದು, ಬ್ಯಾಟಿಂಗ್ ಆರಂಭಿಸಿದ ಭಾರತ, ನಾಯಕ ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿತು. ತದನಂತರ ಸರಣಿ ಸಿಕ್ಸರ್ಗಳ ಮುಖೇನ ವೇಗವಾಗಿ ರನ್ ಕಲೆಹಾಕಿದ ಶುಭಮನ್ ಗಿಲ್ ಕಾಲು ನೋವಿನಿಂದ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ನತ್ತ ಮುಖಮಾಡಿದರು. ಕೊಹ್ಲಿ-ಅಯ್ಯರ್ ಜತೆಯಾಟದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗಿದೆ.
ಈ ಹಿಂದೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ತಲುಪಿರುವುದಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಭಾರೀ ಸಂತಸ ವ್ಯಕ್ತಪಡಿಸಿ, ವಿಶ್ವಕಪ್ ಟ್ರೋಫಿ ಗೆಲ್ಲುವಂತೆ ಶೂಭಕೋರಿದ್ದರು. ಇಂದು ಮುಂಬೈನಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯ ವೀಕ್ಷಿಸಲು ವಾಂಖೆಡೆ ಸ್ಟೇಡಿಯಂಗೆ ಆಗಮಿಸಿರುವ ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ನಟರು ಸ್ಟಾಂಡ್ನಲ್ಲಿ ನಿಂತು ಆಟಗಾರರಿಗೆ ಭರಪೂರ ಬೆಂಬಲ ನೀಡುತ್ತಿದ್ದಾರೆ.
ಇದನ್ನೂ ಓದಿ: ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ
ಸ್ಟಾರ್ ಕಲಾವಿದರು ಸೇರಿದಂತೆ ರಾಜಕೀಯ ಹಿನ್ನೆಲೆಯ ಬಹು ದೊಡ್ಡ ನಾಯಕರು ಕೂಡ ಪಂದ್ಯ ವೀಕ್ಷಣೆಗೆ ಆಗಮಿಸಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್, ಅಮೀರ್ ಖಾನ್, ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ವೆಂಕಟೇಶ್, ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ, ಜಾನ್ ಅಬ್ರಹಂ ಸೇರಿದಂತೆ ಮುಂತಾದವರು ಎದ್ದು ನಿಂತು ಟೀಮ್ ಇಂಡಿಯಾಗೆ ಬೆಂಬಲಿಸಿದ್ದಾರೆ,(ಏಜೆನ್ಸೀಸ್).