ದುಬೈ: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಕಳೆದ 5 ವರ್ಷಗಳಿಂದ ಐಸಿಸಿ ಏಕದಿನ ಆಲ್ರೌಂಡರ್ ರ್ಯಾಂಕಿಂಗ್ನ ಅಗ್ರಸ್ಥಾನದಲ್ಲಿ ಸ್ಥಾಪಿಸಿದ್ದ ಪಾರುಪತ್ಯವನ್ನು ಅ್ಘಾನಿಸ್ತಾನದ ಮೊಹಮದ್ ನಬಿ ಬೇಧಿಸಿದ್ದಾರೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದ 39 ವರ್ಷದ ನಬಿ, ನಂ. 1 ಪಟ್ಟಕ್ಕೇರಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 2015ರಲ್ಲಿ 38 ವರ್ಷ, 8 ತಿಂಗಳು ವಯಸ್ಸಿನಲ್ಲಿ ಅಗ್ರಸ್ಥಾನಕ್ಕೇರಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಶಕೀಬ್ ಐಸಿಸಿ ರ್‍ಯಾಂಕಿಂಗ್ ಇತಿಹಾಸದಲ್ಲೇ ಸರ್ವಾಧಿಕ 1,739 ದಿನಗಳ ಕಾಲ ಸತತವಾಗಿ ಅಗ್ರಸ್ಥಾನದಲ್ಲಿ ನೆಲೆಸಿದ ದಾಖಲೆ ಬರೆದಿದ್ದಾರೆ. ಅವರು 2019ರ ಮೇ 7ರಿಂದ ಅಗ್ರಸ್ಥಾನದಲ್ಲಿದ್ದರು.