ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭಮಾನ್ ಗಿಲ್ ಐಸಿಸಿಯ ಸೆಪ್ಟೆಂಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ತಿಂಗಳು ಏಷ್ಯಾಕಪ್ ಮತ್ತು ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 80ರ ಸರಾಸರಿಯಲ್ಲಿ ಒಟ್ಟಾರೆ 480 ರನ್ ಸಿಡಿಸಿದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ದೇಶಬಾಂಧವ ವೇಗಿ ಮೊಹಮದ್ ಸಿರಾಜ್ ಮತ್ತು ಇಂಗ್ಲೆಂಡ್ನ ಡೇವಿಡ್ ಮಲಾನ್ರನ್ನು ಹಿಂದಿಕ್ಕಿ ಗಿಲ್ ಪ್ರಶಸ್ತಿ ಒಲಿಸಿಕೊಂಡಿದ್ದಾರೆ. ಗಿಲ್ ಈ ಪ್ರಶಸ್ತಿಯನ್ನು 2 ಬಾರಿ ಪಡೆದುಕೊಂಡಿರುವ ಭಾರತದ ಮೊದಲ ಆಟಗಾರರಾಗಿದ್ದಾರೆ. ಈ ಮುನ್ನ ಜನವರಿಯಲ್ಲೂ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.