ICC:ಇದೇ ಫೆ.19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಪ್ರಶಸ್ತಿ ಗೆದ್ದ ಮತ್ತು ಪಂದ್ಯಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಗಳಿಗೆ ಬೃಹತ್ ಮೊತ್ತದ ಬಹುಮಾನವನ್ನು ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಘೋಷಣೆ ಮಾಡಿದೆ.
ಹೌದು, 2017ರ ಬಳಿಕ ಈ ಬಾರಿ ಚಾಂಪಿಯನ್ ಟ್ರೋಫಿ ಆಯೋಜನೆ ಮಾಡಿದ್ದು, ಟ್ರೋಫಿ ಗೆದ್ದ ತಂಡ ಬರೊಬ್ಬರಿ 20 ಕೋಟಿ ರೂ. ಬಹುಮಾನ(2.24ಮಿಲಿಯನ್) ಪಡೆಯಲಿದೆ ಎಂದು ಐಸಿಸಿ ಮೂಲಗಳಿಂದ ಖಚಿತವಾಗಿದೆ ಎಂದು ವರದಿಯಾಗಿದೆ.
ಅಲ್ಲದೆ, ಮಾರ್ಚ್ 9 ರಂದು ಫೈನಲ್ ಇದ್ದು, ಅಂದು ವಿಜೇತ ಟ್ರೋಫಿ ಜತೆ ಬಹುಮಾನ ವಿತರಣೆಯಾಗಲಿದೆ. ಇನ್ನು ರನ್ನರ್ ಅಪ್ ತಂಡಕ್ಕೆ 1.12 ಮಿಲಿಯನ್ ಬಹುಮಾನ(10.4 ಕೋಟಿ ರೂ.) ಸಿಗಲಿದೆ ಎಂದು ಖಚಿತವಾಗಿದೆ. ಇದು 2017ರ ಟ್ರೋಫಿಗಿಂತ ಶೇ.53ರಷ್ಟು ಹೆಚ್ಚಳವಾಗಿದೆ. ಇದರ ಜತೆಗೆ 2025ರ ಚಾಂಪಿಯನ್ ಟ್ರೋಫಿಯಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳಿಗೆ ತಲಾ 12500 ಡಾಲರ್ ಸಿಗಲಿದೆ.
ವಿಜೇತ - 20.8 ಕೋಟಿ ರೂ.
ರನ್ನರ್ ಅಪ್ - 10.4 ಕೋಟಿ ರೂ.
ಸೆಮಿಫೈನಲಿಸ್ಟ್‌ಗಳು - 5.2 ಕೋಟಿ ರೂ.
5ನೇ ಮತ್ತು 6ನೇ ಸ್ಥಾನಗಳು - 3 ಕೋಟಿ ರೂ.
7ನೇ ಮತ್ತು 8ನೇ ಸ್ಥಾನಗಳು - 1.2 ಕೋಟಿ ರೂ.
ಪ್ರತಿ ಪಂದ್ಯಕ್ಕೆ - 29 ಲಕ್ಷ ರೂ. ಬಹುಮಾನ ನಿಗದಿಯಾಗಿದೆ.(ಏಜೆನ್ಸೀಸ್)